×
Ad

ಕನಕ್ಟ್ 2018: ಸಾಮುದಾಯಿಕ ಸಮ್ಮಿಲನದ ಪೋಸ್ಟರ್ ಬಿಡುಗಡೆ

Update: 2018-11-12 22:52 IST

ದುಬೈ, ನ. 12: ಡಿಸೆಂಬರ್ 3ರಂದು ಮಂಗಳೂರು ನೆಹರೂ ಮೈದಾನದಲ್ಲಿ ನಡೆಯಲಿರುವ ಆದರ್ಶ ವಿವಾಹ, ಮೀಲಾದ್ ಜಾಥಾ, ಹುಬ್ಬುರ್ರಸೂಲ್ ಕಾನ್ಫರೆನ್ಸ್, ದಾರುಲ್ ಅಮಾನ್ ವಸತಿ ಯೋಜನೆಗೆ ಚಾಲನೆ ಮುಂತಾದ ಕಾರ್ಯಕ್ರಮಗಳನ್ನೊಳಗೊಂಡ 'ಕನಕ್ಟ್ 2018 ಸಾಮುದಾಯಿಕ ಸಮ್ಮಿಲನ'ದ ಪೋಸ್ಟರನ್ನು ದುಬೈಯ ಕಾಲಿಕಟ್ ಟೌನ್ ರೆಸ್ಟೋರೆಂಟ್ ನಲ್ಲಿ ಸಚಿವ ಯುಟಿ ಖಾದರ್ ಬಿಡುಗಡೆ ಮಾಡಿದರು.

ಕೆಸಿಎಫ್ ಅಂತಾರಾಷ್ಟ್ರೀಯ ಕೋಶಾಧ್ಯಕ್ಷ ಹಾಗೂ ಕನಕ್ಟ್ 2018 ಚೇರ್ ಮ್ಯಾನ್ ಹಾಜಿ ಶೈಖ್ ಬಾವ, ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ ಎಮ್ ಅಬ್ದುಲ್ ಹಮೀದ್ ಈಶ್ವರ ಮಂಗಿಲ, ಯುಎಇ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಅಬ್ದುಲ್ ಹಮೀದ್ ಸಅದಿ, ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಾಜೂರು, ಕೋಶಾಧಿಕಾರಿ ಅಬ್ದುಲ್ ಖಲೀಲ್ ನಿಝಾಮಿ, ಯುಎಇ ರಾಷ್ಟ್ರೀಯ ಸಮಿತಿಯ ಕಾಬಿನೆಟ್ ಸದಸ್ಯರುಗಳಾದ ಮುಹಮ್ಮದ್ ಕುಂಞಿ ಸಖಾಫಿ, ಅಬ್ದುಲ್ ರಹೀಮ್ ಕೋಡಿ, ಮೂಸ ಹಾಜಿ ಬಸರ, ಕಲಂದರ್ ಕಬಕ, ಇಬ್ರಾಹಿಮ್ ಬ್ರೈಟ್ ಮಾರ್ಬಲ್, ಮುಹಮ್ಮದ್ ಶರೀಫ್ ಸಾಲೆತ್ತೂರು, ಅಬ್ದುಲ್ಲ ಹಾಜಿ ನಲ್ಕ, ಅಬ್ದುಲ್ ಕಾದರ್ ಸಅದಿ ಸುಳ್ಯ, ಉಸ್ಮಾನ್ ಹಾಜಿ ನಾಪೋಕ್ಲು, ರಿಯಾಝ್ ಕೊಂಡಂಗೇರಿ, ಝೈನುದ್ದೀನ್ ಹಾಜಿ ಬೆಳ್ಳಾರೆ, ಅಬ್ದುಲ್ ಕರೀಂ ಹಾಜಿ ಬಿಕರ್ನಕಟ್ಟೆ, ಶುಕೂರ್ ಮಾನಿಲ, ಅಬುಧಾಬಿ ಝೋನ್ ಅಧ್ಯಕ್ಷ ಹಸೈನಾರ್ ಅಮಾನಿ, ಕನಕ್ಟ್ 18 ಪಂಚಯೋಜನಾ ಸಮಿತಿಯ ಚೇರ್ ಮಾನ್ ಇಕ್ಬಾಲ್ ಸಿದ್ದಕಟ್ಟೆ, ಕನ್ವೀನರ್ ಇಕ್ಬಾಲ್ ಕುಂದಾಪುರ, ಕೋಶಾಧಿಕಾರಿ ಖಾದರ್ ಸಾಲೆತ್ತೂರು ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭ  ದುಬೈ ಅಂತಾರಾಷ್ಟ್ರೀಯ  ಹೋಲಿ ಕುರ್ ಆನ್ ಪಾರಾಯಣ ಸ್ಪರ್ಧೆಯಲ್ಲಿ  ಭಾರತದ ಪ್ರತಿನಿಧಿಯಾಗಿ ಭಾಗವಹಿಸುತ್ತಿರುವ ಯುಟಿ ಖಾದರ್ ಅವರ ಪುತ್ರಿ ಹವ್ವಾ ನಸೀಮಾಳಿಗೆ ಕೆಸಿಎಫ್ ವತಿಯಿಂದ ಯು.ಟಿ ಖಾದರ್ ಮೂಲಕ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News