ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಶಾಂತಿ ಪ್ರಕಾಶನದ ಮಳಿಗೆ

Update: 2018-11-12 17:50 GMT

ಶಾರ್ಜಾ, ನ. 12: ಅಂತಾರಾಷ್ಟ್ರೀಯ ಪುಸ್ತಕ ಮಹಾ ಮೇಳದಲ್ಲಿ ತೃತೀಯ ಬಾರಿಗೆ ಮಳಿಗೆಯನ್ನು ತೆರೆದಿದ್ದ ಕರ್ನಾಟಕದ ಏಕೈಕ ಮಳಿಗೆ ಎಂಬ ಖ್ಯಾತಿಯ ಶಾಂತಿ ಪ್ರಕಾಶನವು ಹನ್ನೊಂದು ದಿನಗಳ ಈ ಪುಸ್ತಕ ಮೇಳದ ಕೊನೆಯ ದಿನವಾದ ಶನಿವಾರ ಸಂಜೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಚಿವ ಯುಟಿ ಖಾದರ್ ಅವರ ಉಪಸ್ಥಿತಿಯಲ್ಲಿ ಸಮಾರೋಪಗೊಂಡಿತು.

ಈ ಸಂದರ್ಭ ಕರ್ನಾಟಕ ಸಂಘ ಅಬುಧಾಬಿ ಅಧ್ಯಕ್ಷ ಸರ್ವೋತ್ತಮ್ ಶೆಟ್ಟಿ, ಕರ್ನಾಟಕ ಸಂಘ ಶಾರ್ಜಾ ಅಧ್ಯಕ್ಷ ಸುಗಂದ್ ರಾಜ್ ಬೇಕಲ್, ಹಿದಾಯ ಫೌಂಡೇಷನ್ ಅಧ್ಯಕ್ಷ ಖಾಸಿಮ್, ಮಲ್ಟಿಬಿಝ್ ಟ್ರೇಡಿಂಗ್ ನ ಆಸಿಫ್ ಅಲ್ತಾಫ್,  ಪ್ರವೀನ್ ಶೆಟ್ಟಿ, ಮುಹಮ್ಮದ್ ಅಲಿ ಉಚ್ಚಿಲ, ಮನೋಹರ್ ತೋನ್ಸೆ, ಹರೇಕಳ ಹಾಜಬ್ಬ, ಇರ್ಶಾದ್ ಮೂಡುಬಿದಿರೆ, ಇಸ್ಮಾಯೀಲ್ ಬಾಳೆಹೊನ್ನೂರು, ಎಕೆ ಕುಕ್ಕಿಲ ಹಾಗು ಇತರರು ಉಪಸ್ಥಿತರಿದ್ದರು. ಮುಖ್ತಾರ್ ಅಹ್ಮದ್ ಪ್ರಾಸ್ತಾವಿಕ ಮಾತನಾಡಿ, ಖಾದರ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News