ಅಜ್ಮಾನ್‌: ತುಂಬೆ ಆಸ್ಪತ್ರೆಯಲ್ಲಿ ನೈಜೀರಿಯಾ ಮೂಲದ ಮಹಿಳೆಗೆ ಯಶಸ್ವಿ ಮೊಣಗಂಟಿನ ಶಸ್ತ್ರಚಿಕಿತ್ಸೆ

Update: 2018-11-20 15:39 GMT
ಡಾ. ಮುಜೀಬ್ ಮುಹಮ್ಮದ್ ಶೇಕ್

ಅಜ್ಮಾನ್, ನ. 20: ರಸ್ತೆ ಅಪಘಾತಕ್ಕೀಡಾಗಿ ಮೊಣಗಂಟಿನ ಮುರಿತಕ್ಕೊಳಗಾಗಿದ್ದ ನೈಜೀರಿಯಾ ಮೂಲದ 52ರ ಹರೆಯದ ಮಹಿಳೆಗೆ ಅಜ್ಮಾನ್‌ನ ತುಂಬೆ ಆಸ್ಪತ್ರೆಯಲ್ಲಿ ಯಶಸ್ವಿ ಮೊಣಗಂಟಿನ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಘಟನೆ ನಡೆದು ಎರಡು ವಾರಗಳ ನಂತರ ಮಹಿಳೆ ತುಂಬೆ ಆಸ್ಪತ್ರೆಗೆ ಚಿಕಿತ್ಸೆಗೆಂದು ಆಗಮಿಸಿದ್ದರು. ಅಲ್ಲಿ ಆಕೆಯನ್ನು ಮೂಳೆತಜ್ಞ (ಶಸ್ತ್ರಚಿಕಿತ್ಸೆ) ವಿಭಾಗದ ಮುಖ್ಯಸ್ಥ ಡಾ. ಮುಜೀಬ್ ಮುಹಮ್ಮದ್ ಶೇಕ್ ಪರೀಕ್ಷಿಸಿದರು. ಮಹಿಳೆಯ ಮೊಣಗಂಟಿನ ಎಕ್ಸ್‌ರೇ, ಎಂಆರ್‌ಐ ಸ್ಕಾನ್, ಡೋಪ್ಲರ್ ಸ್ಕಾನ್ ಇತ್ಯಾದಿಗಳನ್ನು ನಡೆಸಿದ ನಂತರ ವೈದ್ಯರು ಆಕೆಯ ಮೊಣಗಂಟು ಸಂಪೂರ್ಣವಾಗಿ ಹಾನಿಗೀಡಾಗಿದ್ದು ಅದನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆಯೊಂದೇ ದಾರಿ ಎಂಬ ನಿರ್ಧಾರಕ್ಕೆ ಬಂದರು. ಚಿಕಿತ್ಸೆಯ ಭಾಗವಾಗಿ ರೋಗಿಯನ್ನು ಫಿಸಿಯೋಥೆರಪಿ ಚಿಕಿತ್ಸೆಗೆ ಒಳಪಡಿಸಲಾಯಿತು. ನಂತರ ಚಿಕಿತ್ಸೆಯ ಎರಡನೇ ಹಂತವಾಗಿ ಆಕೆಯನ್ನು ಎಸಿಎಲ್ ಮತ್ತು ಪಿಸಿಎಲ್ ಮರುಸ್ಥಾಪನಾ ಚಿಕಿತ್ಸೆಗೆ ಒಳಪಡಿಸಲಾಯಿತು.

ಶಸ್ತ್ರಚಿಕಿತ್ಸೆಯ ನಂತರ ಮಹಿಳೆಯ ಮೊಣಗಂಟನ್ನು ಸಂಪೂರ್ಣವಾಗಿ ಸರಿಪಡಿಸಲಾಯಿತು ಮತ್ತು ಆಕೆ ತನ್ನ ಮೊಣಕಾಲನ್ನು ಸಾಮಾನ್ಯದಂತೆ ಚಲಿಸಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಡಾ. ಮುಜೀಬ್.

ಆರಂಭದಲ್ಲಿ ನಾನು ಯೂರೋಪ್ ಅಥವಾ ಯುಎಇಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಯೋಚಿಸಿದ್ದೆ. ಆದರೆ ನೈಜೀರಿಯಾದಲ್ಲಿ ವೈದ್ಯನಾಗಿರುವ ನನ್ನ ಮಗ ಅಜ್ಮಾನ್‌ನ ತುಂಬೆ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ. ಇಲ್ಲಿನ ತಜ್ಞ ವೈದ್ಯರು, ಅತ್ಯುನ್ನತ ಸೌಲಭ್ಯಗಳು ಕೈಗೆಟಕುವ ದರದಲ್ಲಿ ಲಭ್ಯವಿರುವುದು ನಿಜವಾಗಿಯೂ ರೋಗಿಗಳಿಗೆ ವರದಾನವಾಗಿದೆ ಎಂದು ಸದ್ಯ ಆರೋಗ್ಯವಾಗಿರುವ ಮಹಿಳೆ ತಿಳಿಸಿದ್ದಾರೆ.

ತುಂಬೆ ಆಸ್ಪತ್ರೆಗಳನ್ನು ಯುಎಇಯ ವೈದ್ಯಕೀಯ ಪ್ರವಾಸೋದ್ಯಮದ ಅಗ್ರಮಾನ್ಯರು ಎಂದು ಪರಿಗಣಿಸಲಾಗಿದೆ. ಯುಎಇಯಲ್ಲಿರುವ ಮತ್ತು ಭಾರತದ ಹೈದರಾಬಾದ್‌ನಲ್ಲಿರುವ ತುಂಬೆ ಆಸ್ಪತ್ರೆಗಳು ಜಗತ್ತಿನಾದ್ಯಂತದ ವೈದ್ಯಕೀಯ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News