ಮಾಜಿ ಪ್ರಿಯಕರನನ್ನು ಕತ್ತರಿಸಿ, ಖಾದ್ಯ ತಯಾರಿಸಿ ಕಾರ್ಮಿಕರಿಗೆ ಹಂಚಿದ ಮಹಿಳೆ!

Update: 2018-11-21 17:32 GMT

ಯುಎಇ, ನ.21: ತನ್ನ ಮಾಜಿ ಪ್ರಿಯತಮನನ್ನು ಕೊಂದು ಆತನ ಮಾಂಸವನ್ನು ಅರೇಬಿಕ್ ಖಾದ್ಯದಂತೆ ಬೇಯಿಸಿ ಮಹಿಳೆಯೊಬ್ಬಳು ಕಟ್ಟಡ ಕಾರ್ಮಿಕರಿಗೆ ಹಂಚಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆತನ ಕೆಲ ಭಾಗಗಳನ್ನು ಆಕೆ ನಾಯಿಗೂ ಹಾಕಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಆಕೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಅಲ್ ಐನ್ ಪ್ರಾಸಿಕ್ಯೂಶನ್ ನ ಮೂಲಗಳು ತಿಳಿಸಿವೆ. ತಾನು ಮಾಜಿ ಪ್ರಿಯತಮನನ್ನು ಕತ್ತರಿಸಿದೆ. ಹಳೆಯ ದ್ವೇಷದಿಂದ ಈ ಕೃತ್ಯ ಎಸಗಿದ್ದೆ ಎಂದು ಮಹಿಳೆ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ.

ಅಜ್ಮಾನ್ ನಲ್ಲಿರುವ ಯುವಕನ ಸಹೋದರ ಜನವರಿಯಲ್ಲಿ ನಾಪತ್ತೆ ದೂರೊಂದನ್ನು ನೀಡಿದ್ದ. ನಂತರ ಆರೋಪಿ ಮಹಿಳೆಯ ಮನೆಗೂ ತೆರಳಿ ತನ್ನ ಸಹೋದರನ ಬಗ್ಗೆ ವಿಚಾರಿಸಿದ್ದ. ತನಗೆ ಆತನ ಬಗ್ಗೆ ತಿಳಿದಿಲ್ಲ. ತಾನು ಆತನಿಂದ ದೂರವಾಗಿದ್ದೇನೆ ಎಂದು ಆಕೆ ತಿಳಿಸಿದ್ದಳು. ಆದರೆ ಮೃತ ಯುವಕನ ಸಹೋದರನಿಗೆ ಆರೋಪಿಯ ಮನೆಯಲ್ಲಿ ಹಲ್ಲೊಂದು ಸಿಕ್ಕಿತ್ತು. ಇದರಿಂದ ಆತನಲ್ಲಿ ಸಂಶಯ ಉದ್ಭವಿಸಿತ್ತು. ಡಿಎನ್ ಎ ಪರೀಕ್ಷೆಯ ನಂತರ ಆ ಹಲ್ಲು ಮೃತ ಯುವಕನದ್ದು ಎನ್ನುವುದು ಖಚಿತವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News