ಮಾನವಹಕ್ಕುಗಳ ಕಾರ್ಯಕರ್ತರಿಗೆ ಹಿಂಸೆ, ಲೈಂಗಿಕ ಕಿರುಕುಳ: ಆ್ಯಮ್ನೆಸ್ಟಿ ಆರೋಪ

Update: 2018-11-24 17:10 GMT

ದುಬೈ, ನ. 24: ಸೌದಿ ಅರೇಬಿಯದಲ್ಲಿ ಮಾನವಹಕ್ಕುಗಳ ಕಾರ್ಯಕರ್ತರಿಗೆ ಹಿಂಸೆ ಹಾಗೂ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂಬ ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಮತ್ತು ಹ್ಯೂಮನ್ ರೈಟ್ಸ್ ವಾಚ್ ಸಂಘಟನೆಗಳ ವರದಿಗಳನ್ನು ಸೌದಿ ಅರೇಬಿಯ ಶುಕ್ರವಾರ ನಿರಾಕರಿಸಿದೆ.

‘‘ಅವರು ಮಾಡಿರುವ ಆರೋಪಗಳನ್ನು ಸೌದಿ ಅರೇಬಿಯ ಸರಕಾರವು ಸ್ಪಷ್ಟವಾಗಿ ಹಾಗೂ ಬಲವಾಗಿ ನಿರಾಕರಿಸುತ್ತದೆ. ‘ಅನಾಮಧೇಯ ಸಾಕ್ಷಗಳು’ ಅಥವಾ ‘ಬಲ್ಲ ಮೂಲಗಳ’ನ್ನು ಉಲ್ಲೇಖಿಸಿ ಮಾಡಲಾಗಿರುವ ಆರೋಪಗಳು ತಪ್ಪು’’ ಎಂದು ಮಾಧ್ಯಮ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಮಹಿಳಾ ಮಾನವಹಕ್ಕುಗಳ ಹೋರಾಟಗಾರರು ಸೇರಿದಂತೆ, ಮೇ ತಿಂಗಳಿಂದ ಬಂಧನದಲ್ಲಿರುವ ಹಲವಾರು ಸಾಮಾಜಿಕ ಕಾರ್ಯಕರ್ತರನ್ನು ಸೌದಿ ಅರೇಬಿಯ ಶೋಷಣೆಗೊಳಪಡಿಸುತ್ತಿದೆ ಎಂದು ಮಾನವಹಕ್ಕು ಗುಂಪುಗಳು ಮಂಗಳವಾರ ಆರೋಪಿಸಿರುವುದನ್ನು ಸ್ಮರಿಸಬಹುದಾಗಿದೆ.

ಸೌದಿ ಅರೇಬಿಯದ ವಸ್ತುತಃ ಆಡಳಿತಗಾರ, ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ಸಂಭಾವ್ಯ ಎದುರಾಳಿಗಳ ಬಾಯಿ ಮುಚ್ಚಿಸುವ ಪ್ರಯತ್ನವೆಂಬಂತೆ ಹಲವಾರು ಧಾರ್ಮಿಕ ನಾಯಕರು, ಬುದ್ಧಿಜೀವಿಗಳು ಮತ್ತು ಮಾನವಹಕ್ಕುಗಳ ಹೋರಾಟಗಾರರನ್ನು ಬಂಧಿಸಲಾಗಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News