ಒಮಾನ್: ವಿದೇಶಿಯರ ನೇಮಕ ನಿಷೇಧ ವಿಸ್ತರಣೆ

Update: 2018-11-27 17:02 GMT

ಮಸ್ಕತ್, ನ. 27: ಒಮಾನ್‌ನಲ್ಲಿ ‘ಒಮಾನೀಕರಣ’ದ ಭಾಗವಾಗಿ ವಿದೇಶಿ ಕೆಲಸಗಾರರಿಗೆ ಉದ್ಯೋಗ ವೀಸಾ ನೀಡುವುದರ ಮೇಲಿನ ನಿಷೇಧವನ್ನು ಮಾನವ ಸಂಪನ್ಮೂಲ ಸಚಿವಾಲಯ ವಿಸ್ತರಿಸಿದೆ.

ಈಗ ನಿಷೇಧದ ವ್ಯಾಪ್ತಿಯಲ್ಲಿ ಖರೀದಿ ಹಾಗೂ ಮಾರಾಟ ಪ್ರತಿನಿಧಿಗಳು, ಕಟ್ಟಡ ನಿರ್ಮಾಣ ಕೆಲಸಗಾರರು, ಸ್ವಚ್ಛತೆ ಮತ್ತು ವರ್ಕ್‌ಶಾಪ್ ಉದ್ಯೋಗಿಗಳನ್ನೂ ಸೇರ್ಪಡೆಗೊಳಿಸಲಾಗಿದೆ.

ಈ ವರ್ಷದ ಜನವರಿಯಲ್ಲಿ ಅದು ನಿಷೇಧದ ವ್ಯಾಪ್ತಿಗೆ 87 ಉದ್ಯೋಗಗಳನ್ನು ಸೇರ್ಪಡೆಗೊಳಿಸಿತ್ತು. ಈ ಉದ್ಯೋಗಗಳಿಗೆ ಒಮಾನ್ ನಾಗರಿಕರಲ್ಲದವರನ್ನು ನೇಮಿಸುವುದನ್ನು ಆರು ತಿಂಗಳು ನಿಷೇಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News