ಖಶೋಗಿ ಹತ್ಯೆಯ ವೇಳೆ ಸೌದಿ ಯುವರಾಜ 11 ಸಂದೇಶ ಕಳುಹಿಸಿದ್ದರು: ಪತ್ರಿಕಾ ವರದಿ

Update: 2018-12-01 17:18 GMT

ವಾಶಿಂಗ್ಟನ್, ಡಿ. 1: ಇಸ್ತಾಂಬುಲ್‌ನಲ್ಲಿನ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಯಲ್ಲಿ ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿಯ ಹತ್ಯೆ ನಡೆಯುವ ಗಂಟೆಗಳ ಮೊದಲು ಹಾಗೂ ಬಳಿಕ, ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ತನ್ನ ಆಪ್ತ ಸಲಹೆಗಾರನಿಗೆ ಕನಿಷ್ಠ 11 ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಅತ್ಯಂತ ರಹಸ್ಯ ಸಿಐಎ ವರದಿಯೊಂದನ್ನು ಉಲ್ಲೇಖಿಸಿ ‘ವಾಲ್ ಸ್ಟ್ರೀಟ್ ಜರ್ನಲ್’ ಪತ್ರಿಕೆ ಶನಿವಾರ ವರದಿ ಮಾಡಿದೆ.

ಅಕ್ಟೋಬರ್ 2ರಂದು ಖಶೋಗಿಯನ್ನು ಹತ್ಯೆಗೈದ ಸೌದಿ ತಂಡದ ನೇತೃತ್ವವನ್ನು ಈ ಆಪ್ತ ಸಲಹೆಗಾರ ವಹಿಸಿದ್ದನು ಎಂದು ಪತ್ರಿಕೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News