ಪಾಸ್‌ಪೋರ್ಟ್ ಕಚೇರಿಗಳಲ್ಲಿ ಮಹಿಳೆಯರ ನೇಮಕಕ್ಕೆ ಸೌದಿ ಮುಂದು

Update: 2018-12-03 14:43 GMT
ಸಾಂದರ್ಭಿಕ ಚಿತ್ರ

ಜಿದ್ದಾ, ಡಿ. 3: ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ಸೌದಿ ಅರೇಬಿಯದ ಪಾಸ್‌ಪೋರ್ಟ್ ನಿರ್ದೇಶನಾಲಯ ಮುಂದಾಗಿದೆ. ಉದ್ಯೋಗಾಕಾಂಕ್ಷಿ ಮಹಿಳೆಯರು ತಮ್ಮ ಹೆಸರುಗಳನ್ನು ನಿರ್ದೇಶನಾಲಯದಲ್ಲಿ ನೋಂದಾಯಿಸಬಹುದಾಗಿದೆ ಎಂದು ಸೌದಿ ಅರೇಬಿಯದ ಆಂತರಿಕ ಸಚಿವಾಲಯ ಪ್ರಕಟಿಸಿದೆ.

ನೂತನವಾಗಿ ನೇಮಕಗೊಳ್ಳುವವರಿಗೆ ಸೈನಿಕ ದರ್ಜೆಗಳನ್ನು ನೀಡಲಾಗುವುದು ಹಾಗೂ ಅವರನ್ನು ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ನಿಯೋಜಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಮಹಿಳಾ ಅಭ್ಯರ್ಥಿಗಳು ಸೌದಿ ಅರೇಬಿಯದಲ್ಲೇ ಬೆಳೆದ ಸೌದಿ ರಾಷ್ಟ್ರೀಯರಾಗಿರಬೇಕು ಅಥವಾ ಹೆತ್ತವರು ವಿದೇಶಗಳಲ್ಲಿ ಕೆಲಸ ಮಾಡುತ್ತಿರುವಾಗ ವಿದೇಶದಲ್ಲಿ ಬೆಳೆದವರಾಗಿರಬೇಕು ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News