ಯುಎಇ: ಅಕ್ರಮ ವಾಸ್ತವ್ಯವಿರುವ ವಿದೇಶಿಯರಿಗೆ ಸಿಹಿಸುದ್ದಿ

Update: 2018-12-03 15:48 GMT

ಶಾರ್ಜಾ (ಯುಎಇ), ಡಿ. 3: ಯುಎಇಯಲ್ಲಿ ಅಕ್ರಮವಾಗಿ ನೆಲೆಸಿದವರಿಗೆ ಕ್ಷಮಾದಾನ ನೀಡುವ ಯೋಜನೆಯನ್ನು ದೇಶದ ರಾಷ್ಟ್ರೀಯ ದಿನದ ಸಂದರ್ಭದಲ್ಲಿ ಒಂದು ತಿಂಗಳು ವಿಸ್ತರಿಸಲಾಗಿದೆ ಎಂದು ‘ಖಲೀಜ್ ಟೈಮ್ಸ್’ ವರದಿ ಮಾಡಿದೆ.

ಕ್ಷಮಾದಾನ ಅರ್ಜಿಗಳ ವಿಲೇವಾರಿಯನ್ನು ಮಂಗಳವಾರ ಆರಂಭಿಸಲಾಗುವುದು ಹಾಗೂ ಅಕ್ರಮವಾಗಿ ಯುಎಇಯಲ್ಲಿ ನೆಲೆಸಿರುವ ವಿದೇಶಿಯರು ಕ್ಷಮಾದಾನದ ಪ್ರಯೋಜನವನ್ನು ಡಿಸೆಂಬರ್ 31ರವರೆಗೆ ಪಡೆದುಕೊಳ್ಳಬಹುದು.

ಆಗಸ್ಟ್ ತಿಂಗಳಲ್ಲಿ ಜಾರಿಗೆ ತರಲಾಗಿದ್ದ ಮೂಲ ಯೋಜನೆಯು ಅಕ್ಟೋಬರ್ 31ರಂದು ಕೊನೆಗೊಳ್ಳಬೇಕಾಗಿತ್ತು. ಅದನ್ನು 30 ದಿನಗಳ ಕಾಲ ವಿಸ್ತರಿಸಲಾಗಿತ್ತು ಹಾಗೂ ಹೊಸ ಅವಧಿಯು ನವೆಂಬರ್ 30ರಂದು ಕೊನೆಗೊಳ್ಳಬೇಕಾಗಿತ್ತು. ಈಗ ಅದನ್ನು ಇನ್ನೂ ಒಂದು ತಿಂಗಳು ವಿಸ್ತರಿಸಲಾಗಿದೆ.

ಅಕ್ರಮವಾಗಿ ನೆಲೆಸಿರುವ ವಿದೇಶಿಯರು ತಮ್ಮ ಸ್ಥಾನಮಾನವನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಲು ಹಾಗೂ ಅವರಿಗೆ ದೇಶದಲ್ಲಿ ಕೆಲಸ ಮಾಡುವ ಅವಕಾಶ ನೀಡಲು ಯುಎಇ ಉತ್ಸುಕವಾಗಿದೆ ಎಂದು ಶಾರ್ಜಾ ವಲಸೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಖಲೀಜ್ ಟೈಮ್ಸ್’ಗೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News