ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಜನರ ಕಾಲ್ತುಳಿತವೇ ವಿದ್ಯುತ್ !

Update: 2018-12-05 15:03 GMT

ಅಬುಧಾಬಿ, ಡಿ. 5: ಜನರ ಕಾಲ್ತುಳಿತವನ್ನು ವಿದ್ಯುತ್ ಆಗಿ ಪರಿವರ್ತಿಸುವ ವ್ಯವಸ್ಥೆಗೆ ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಬುಧವಾರ ಚಾಲನೆ ನೀಡಲಾಗಿದೆ.

ಈ ಉದ್ದೇಶಕ್ಕಾಗಿ ವಿಮಾನ ನಿಲ್ದಾಣದ ಎರಡು ಟರ್ಮಿನಲ್‌ಗಳನ್ನು ಸಂಪರ್ಕಿಸುವ ದಾರಿಯಲ್ಲಿ 16 ಚದರ ಮೀಟರ್ ವಿಸ್ತೀರ್ಣದ ‘ಇಂಧನ ಉತ್ಪಾದಕ ಕಾಲುದಾರಿ’ಯನ್ನು ಅಳವಡಿಸಲಾಗಿದೆ.

ದಿನಕ್ಕೆ ಸುಮಾರು 8,000 ಪ್ರಯಾಣಿಕರ ಹೆಜ್ಜೆಗಳನ್ನು ಸಂಗ್ರಹಿಸಿ ವಿದ್ಯುತ್ ಶಕ್ತಿಯಾಗಿ ಪರಿವರ್ತಿಸಲಾಗುತ್ತದೆ. ಈ ವಿದ್ಯುತ್ತನ್ನು ಜನರ ಓಡಾಟ ಅಂಕಿಸಂಖ್ಯೆಯ ಮೇಲೆ ನಿಗಾ ಇಡಲು ಹಾಗೂ ಟರ್ಮಿನಲ್ 1 ಮತ್ತು 3ರ ನಡುವಿನ ದಾರಿಯಲ್ಲಿ ದೀಪಗಳನ್ನು ಬೆಳಗಿಸಲು ಬಳಸಲಾಗುತ್ತದೆ.

‘‘ನಾಳಿನ ದತ್ತಾಂಶ ಚಾಲಿತ ಸ್ಮಾರ್ಟ್ ಸಿಟಿಗಳಿಗೆ ವಿದ್ಯುತ್ ಒದಗಿಸುವ ‘ಪೇವ್‌ಜನ್ ವಾಕ್‌ವೇ’ಯನ್ನು ಅಳವಡಿಸಲು ನಾವು ‘ಮಾಸ್ಡರ್’ ಜೊತೆ ಭಾಗೀದಾರಿಕೆ ಹೊಂದಿದ್ದೇವೆ. ಈ ಮೂಲಕ ಪರ್ಯಾಯ ಇಂಧನ ಮೂಲದ ಬಗ್ಗೆ ಪ್ರಯಾಣಿಕರು ಹಾಗೂ ನಿವಾಸಿಗಳಿಗೆ ಮಾಹಿತಿ ನೀಡುವ ಅಭಿಯಾನವೊಂದನ್ನು ನಾವು ಕೈಗೆತ್ತಿಕೊಂಡಿದ್ದೇವೆ’’ ಎಂದು ಅಬುಧಾಬಿ ವಿಮಾನ ನಿಲ್ದಾಣದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಹ್ಮದ್ ಅಲ್ ಶಮಿಸಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News