×
Ad

ಹಜ್, ಉಮ್ರಾ ಸೌಲಭ್ಯ ಹೆಚ್ಚಳಕ್ಕೆ ಸೌದಿ ಒಪ್ಪಂದ

Update: 2018-12-06 23:33 IST

ಜಿದ್ದಾ, ಡಿ. 6: ಹಜ್ ಯಾತ್ರಿಕರ ಅನುಭವವನ್ನು ಸುಧಾರಿಸುವ ಹಾಗೂ 3 ಕೋಟಿ ಯಾತ್ರಿಕರನ್ನು ಸ್ವಾಗತಿಸುವ ಸೌದಿ ಅರೇಬಿಯದ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಸೌದಿ ಅರೇಬಿಯದ ಹಜ್ ಸಚಿವಾಲಯವು ಪ್ರಮುಖ ಪ್ರಯಾಣ ನೋಂದಣಿ ವೆಬ್‌ಸೈಟ್ ‘ಅಗೋಡ’ ಜೊತೆಗೆ ಒಪ್ಪಂದವೊಂದಕ್ಕೆ ಸಹಿ ಹಾಕಿದೆ.

ಇನ್ನು ಯಾತ್ರಿಕರು ಹಜ್ ಮತ್ತು ಉಮ್ರಾಗಳಿಗಾಗಿ ಸಚಿವಾಲಯ-ಪ್ರಮಾಣಿತ ಹೊಟೇಲ್‌ಗಳನ್ನು ‘ಅಗೋಡ’ ಮೂಲಕ ಕಾದಿರಿಸಬಹುದಾಗಿದೆ.

ಕಾದಿರಿಸುವ ವೇಳೆ, ಭಾಷೆಗಳು ಮತ್ತು ಕರೆನ್ಸಿಗಳಲ್ಲಿ ಒಪ್ಪಂದವು ಹೆಚ್ಚಿನ ಸ್ವಾತಂತ್ರವನ್ನು ನೀಡಿದೆ.

‘‘ಪ್ರತಿಯೊಬ್ಬ ಮುಸ್ಲಿಮನಿಗೆ ಹಜ್ ಮತ್ತು ಉಮ್ರಾಗಳನ್ನು ನಿರ್ವಹಿಸುವ ಹಾಗೂ ಸೌದಿ ಅರೇಬಿಯದಲ್ಲಿರುವ ಪವಿತ್ರ ಸ್ಥಳಗಳಿಗೆ ಭೇಟಿ ನೀಡುವ ಅವಕಾಶವನ್ನು ನೀಡಲು ಹಜ್ ಮತ್ತು ಉಮ್ರಾ ಸಚಿವಾಲಯ ಬಯಸುತ್ತದೆ’’ ಎಂದು ಹಜ್ ಮತ್ತು ಉಮ್ರಾ ಸಚಿವ ಡಾ. ಮುಹಮ್ಮದ್ ಸಾಲಿಹ್ ಬೆಂತಿನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News