ತೈಲ ಉತ್ಪಾದನೆಯಲ್ಲಿ ಕಡಿತ: ಸೌದಿ ಅರೇಬಿಯ ಇಂಗಿತ

Update: 2018-12-06 18:27 GMT

ವಿಯೆನ್ನಾ, ಡಿ. 6: ಕುಸಿಯುತ್ತಿರುವ ತೈಲ ಬೆಲೆಯನ್ನು ಆಧರಿಸಲು ಸಾಕಷ್ಟು ಪ್ರಮಾಣದಲ್ಲಿ ತೈಲ ಉತ್ಪಾದನೆಯನ್ನು ಕಡಿತ ಮಾಡುವ ಬಗ್ಗೆ ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (ಒಪೆಕ್) ಪರಿಶೀಲಿಸುತ್ತಿದೆ ಎಂದು ಸೌದಿ ಅರೇಬಿಯದ ಪೆಟ್ರೋಲಿಯಂ ಸಚಿವರು ಗುರುವಾರ ಹೇಳಿದ್ದಾರೆ.

‘‘ಮಾರುಕಟ್ಟೆಯನ್ನು ಸಮತೋಲನದಲ್ಲಿಡಲು ಪೆಟ್ರೋಲಿಯಂ ಉತ್ಪಾದನೆಯಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿತ ಮಾಡುವ ಬಗ್ಗೆ ನಾವು ಪರಿಶೀಲನೆ ನಡೆಸುತ್ತಿದ್ದೇವೆ. ಈ ಕಡಿತವು ಎಲ್ಲ ಒಪೆಕ್ ದೇಶಗಳಿಗೆ ಹಂಚಿ ಹೋಗುತ್ತದೆ’’ ಎಂದು ಖಾಲಿದ್ ಅಲ್ ಫಲಿಹ್ ತಿಳಿಸಿದರು.

ಅವರು ಆಸ್ಟ್ರಿಯ ರಾಜಧಾನಿ ವಿಯೆನ್ನಾದಲ್ಲಿ ನಡೆಯಲಿರುವ ಒಪೆಕ್ ಸಭೆಗೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News