ಮೊಹಿಯುದ್ದೀನ್ ವುಡ್‌ವರ್ಕ್ಸ್ ಸ್ಥಾಪಕ ಬಿ.ಎಂ. ಅಶ್ರಫ್‌ರಿಗೆ ‘ವರ್ಷದ ಉದ್ಯಮಿ’ ಪುರಸ್ಕಾರ

Update: 2018-12-08 16:16 GMT

ದುಬೈ, ಡಿ. 8: ಪ್ರತಿಷ್ಠಿತ ಮತ್ತು ಹಳೆಯ ಮರ ಸಿಗಿಯುವ ಕಾರ್ಖಾನೆಯಾಗಿರುವ ಹಾಗೂ ಮಧ್ಯಪೂರ್ವ ದೇಶಗಳಲ್ಲಿ ಮರದ ದಿಮ್ಮಿ ಹಾಗೂ ಮರದ ಹಲಗೆಗಳ ಬೃಹತ್ ಆಮದು ಸಂಸ್ಥೆಯಾಗಿರುವ ಮೊಹಿಯುದ್ದೀನ್ ವುಡ್‌ವರ್ಕ್ಸ್ ಕಂ. ಎಲ್.ಎಲ್‌.ಸಿ.ಯ ಸ್ಥಾಪಕ ಮತ್ತು ಆಡಳಿತ ನಿರ್ದೇಶಕ ಬಿ.ಎಂ.ಅಶ್ರಫ್ ಕೈಗಾರಿಕಾ ನಾವೀನ್ಯತೆಗಾಗಿ 2018ರ ‘ವರ್ಷದ ಉದ್ಯಮಿ ( ಎಂಟರ್ ಪ್ರನರ್ ಆಫ್ ದಿ ಇಯರ್)’ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

ದುಬೈಯ ಎಲ್‌ಎಕ್ಸ್‌ಆರ್ ಹೋಟೆಲ್ಸ್ ಆ್ಯಂಡ್ ರಿಸಾರ್ಟ್ಸ್‌ನಲ್ಲಿ ನವೆಂಬರ್ 28ರಂದು ‘ಎಂಇಎನ್‌ಎ’ನ ಸಹಸಂಸ್ಥೆ ಬಿಎನ್‌ಸಿ ಪಬ್ಲಿಷಿಂಗ್ ಆಯೋಜಿಸಿದ್ದ ಸಮಾರಂಭದಲ್ಲಿ ಅಶ್ರಫ್‌ರಿಗೆ ಪುರಸ್ಕಾರ ಪ್ರದಾನ ಮಾಡಲಾಯಿತು.

ಯುಎಇಯಲ್ಲಿ ಭಾರತದ ಕಾನ್ಸುಲ್ ಜನರಲ್ ಆಗಿರುವ ವಿಪುಲ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಅಶ್ರಫ್ ಹಾಗೂ ಪ್ರಶಸ್ತಿ ಪಡೆದಿರುವ ಇತರ ಭಾರತೀಯ ಉದ್ಯಮಿಗಳು ಯುಎಇಯ ಕೈಗಾರಿಕಾ ರಂಗಕ್ಕೆ ಮಹತ್ವದ ಕೊಡುಗೆ ನೀಡಿರುವ ಉದ್ಯಮಿ ಮುಖಂಡರಾಗಿ ಮತ್ತು ಇತರ ಉದ್ಯಮಿಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಿದ ಸಮಿತಿಯ ಸದಸ್ಯರು ತಿಳಿಸಿದ್ದಾರೆ.

1993ರಲ್ಲಿ ಯುಎಇಯಲ್ಲಿ ಆರಂಭವಾಗಿರುವ ಮೊಹಿಯುದ್ದೀನ್ ವುಡ್ ವರ್ಕ್ಸ್ ಸಂಸ್ಥೆ ಇದೀಗ ರಜತ ಮಹೋತ್ಸವ ಆಚರಣೆಯ ಸಂಭ್ರಮದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News