ಜುಬೈಲ್ ನಲ್ಲಿ ಎಮಿರೇಟ್ಸ್ ಖಾದರ್ ಅಂತಿಮ ಸಂಸ್ಕಾರ

Update: 2018-12-11 02:27 GMT

ದಮಾಮ್, ಡಿ. 10: ಸೌದಿ ಅರೇಬಿಯಾದ ದಮಾಮ್ ಸಮೀಪ ಡಿ. 6ರಂದು ಮುಂಜಾನೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಖ್ಯಾತ ಸಮಾಜ ಸೇವಕ ಕೆ. ಅಬ್ದುಲ್ ಖಾದರ್ ( ಎಮಿರೇಟ್ಸ್ ಖಾದರ್ ) ಹಾಗು ಅವರ ಪತ್ನಿಯ ತಂದೆ ಎಂ.ಕೆ. ಅಬ್ದುಲ್ ಖಾದರ್ ಬಾವಾ (ಬಸರಿಕಟ್ಟೆ ಎಸ್ ಕೋಡಿ ಬಾವಾಕ) ಅವರ  ಅಂತಿಮ ಸಂಸ್ಕಾರ ಸೋಮವಾರ ಸಂಜೆ ಜುಬೈಲ್ ನಲ್ಲಿ ನಡೆಯಿತು.

ಜುಬೈಲ್ ನ ಉಮರ್ ಬಿನ್ ಅಬ್ದುಲ್ ಅಝೀಝ್ ಮಸೀದಿಯಲ್ಲಿ ಮಯ್ಯತ್ ನಮಾಝ್ ನಡೆಯಿತು. ಬಳಿಕ ಜುಬೈಲ್ ಖಬರಸ್ತಾನದಲ್ಲಿ ಮೃತದೇಹಗಳನ್ನು ದಫನ ಮಾಡಲಾಯಿತು . ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನರು ಮೃತರಿಗೆ ಅಂತಿಮ ನಮನ ಸಲ್ಲಿಸಿದರು.

ದಮಾಮ್ - ರಿಯಾದ್ ರಸ್ತೆಯಲ್ಲಿರುವ ಆಸ್ಪತ್ರೆಯೊಂದರಲ್ಲಿ ಮೃತದೇಹಗಳನ್ನು ಇಡಲಾಗಿತ್ತು. ಅಂತಿಮ ಸಂಸ್ಕಾರಕ್ಕೆ ಮೊದಲು ಮುಗಿಸಬೇಕಾದ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸೋಷಿಯಲ್ ಫೋರಂ ದಮಾಮ್ - ಜುಬೈಲ್ - ರಿಯಾದ್ ಘಟಕದ ಸದಸ್ಯರು, ಫಹಾದ್ ಇಂಜಿನಿಯರಿಂಗ್ ನ ಫೈರೋಝ್ ಮತ್ತು ಅಶ್ರಫ್, ಸಾಕೋ ಬಶೀರ್ ಸಾಗರ್, ಪ್ಲಾಂಟ್ ಸೊಲ್ಯೂಶನ್ ನ ಅಷ್ಫಾಕ್, ನೌಶಾದ್, ಶರೀಫ್ ಕಾರ್ಕಳ, ಎಕ್ಸ್ ಪರ್ಟೈಸ್ ಗ್ರೂಪ್ ನ ಸೋದರರು ಹಾಗು ಈ ಪ್ರದೇಶಗಳ ಇತರ ಅನಿವಾಸಿ ಭಾರತೀಯ ಉದ್ಯಮಿಗಳು, ಉದ್ಯೋಗಿಗಳು ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News