ವಾಶಿಂಗ್ ಮಶಿನ್‌ ನಲ್ಲಿ ಸಿಲುಕಿ ಮಗು ಮೃತ್ಯು

Update: 2018-12-13 17:26 GMT

ದುಬೈ, ಡಿ. 13: ದುಬೈಯ ಅಜ್ಮಾನ್‌ನಲ್ಲಿ ನಾಲ್ಕು ವರ್ಷದ ಗಂಡು ಮಗುವೊಂದು ಬಿಸಿ ನೀರಿದ್ದ ವಾಶಿಂಗ್ ಮಶಿನ್‌ನಲ್ಲಿ ಸಿಲುಕಿ ಮೃತಪಟ್ಟಿದೆ.

ಮಗು ಮನೆಯಲ್ಲಿ ಅಜ್ಜಿ ಮತ್ತು ಚಿಕ್ಕಪ್ಪನೊಂದಿಗೆ ಇತ್ತು. ಬಟ್ಟೆ ಒಗೆಯುವ ಕೋಣೆಗೆ ನುಸುಳಿಕೊಂಡು ಹೋದ ಮಗು, ಫ್ರಂಟ್-ಲೋಡ್ ವಾಶಿಂಗ್ ಮಶಿನ್‌ನ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿತು. ಆಗ ಒಗೆಯುವ ಯಂತ್ರವು ತನ್ನಿಂತಾನೆ ಚಾಲನೆಗೊಂಡಿತು ಎಂದು ‘ಖಲೀಜ್ ಟೈಮ್ಸ್’ ಗುರುವಾರ ವರದಿ ಮಾಡಿದೆ.

ಮಗುವನ್ನು ಅಜ್ಜಿಯ ಮನೆಯಿಂದ ಕರೆದೊಯ್ಯಲು ಬಂದ ತಾಯಿ ವಾಶಿಂಗ್ ಮಶಿನ್‌ನಲ್ಲಿ ಮಗುವಿನ ಮೃತದೇಹವನ್ನು ಪತ್ತೆಹಚ್ಚಿದರು.

ಮಗುವಿನ ದೇಹವನ್ನು ಹೊರತೆಗೆಯಲು ವಾಶಿಂಗ್ ಮಶಿನ್‌ ಬಾಗಿಲನ್ನು ಒಡೆಯಬೇಕಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News