5ನೇ ವರ್ಷಾಚರಣೆ ನಿಮಿತ್ತ 24 ಕ್ಯಾ. ಚಿನ್ನದ ದಹಬ್ ಕಾರ್ಡ್ ಪರಿಚಯಿಸಿದ ಆಫಿಯಾ

Update: 2018-12-13 17:32 GMT

ದುಬೈ, ಡಿ.13: ಪ್ರಖ್ಯಾತ ಆರೋಗ್ಯ ಸೇವೆ ಪೂರೈಕೆದಾರ ಸಂಸ್ಥೆ ಆಫಿಯಾ ಇನ್ಶುರೆನ್ಸ್ ಸರ್ವಿಸ್ ತನ್ನ ಐದನೇ ವರ್ಷದ ಸಂಭ್ರಮವನ್ನು ಡಿ. 6ರಂದು ದುಬೈಯ ಲೆ ಮೆರಿಡಿಯನ್ ಹೋಟೆಲ್‌ನಲ್ಲಿ ಆಚರಿಸಿತು. ಈ ಸಂದರ್ಭದಲ್ಲಿ ಸಂಸ್ಥೆ 24 ಕ್ಯಾರೆಟ್ ಚಿನ್ನದಿಂದ ಮಾಡಿರುವ ಜಗತ್ತಿನ ಮೊಟ್ಟಮೊದಲ ದಹಬ್ ಕಾರ್ಡನ್ನು ಪರಿಚಯಿಸಿತು.

ಮೊದಲ ಸಂಪೂರ್ಣ ಚಿನ್ನದ ದಹಬ್ ಕಾರ್ಡನ್ನು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ದುಬೈ ಮೂಲದ ತುಂಬೆ ಸಮೂಹದ ಸಂಸ್ಥಾಪಕ ಡಾ. ತುಂಬೆ ಮೊಯಿದಿನ್‌ ಅವರಿಗೆ ಗೌರವಪೂರ್ವಕವಾಗಿ ನೀಡಲಾಯಿತು.

ಈ ವೇಳೆ ತುಂಬೆ ಸಮೂಹದ ಆರೋಗ್ಯ ಸೇವೆ ವಿಭಾಗದ ಉಪಾಧ್ಯಕ್ಷ ಅಕ್ಬರ್ ಮೊಯಿದಿನ್ ತುಂಬೆ ಉಪಸ್ಥಿತರಿದ್ದರು. ನಂತರ ಮಾತನಾಡಿದ ಡಾ. ತುಂಬೆ, ಯಶಸ್ವಿಯಾಗಿ ಐದು ವರ್ಷಗಳನ್ನು ಪೂರೈಸಿ ಮತ್ತಷ್ಟು ಉತ್ಸಾಹದಿಂದ ಮುನ್ನಡೆಯುತ್ತಿರುವ ಆಫಿಯಾ ಸಂಸ್ಥೆಯನ್ನು ಶ್ಲಾಘಿಸಿದರು. ದಹಬ್‌ನಂಥ ವಿನೂತನ ಸೇವೆಯನ್ನು ಆರಂಭಿಸುವ ಮೂಲಕ ಸಂಸ್ಥೆ ಆರೋಗ್ಯ ವಿಮೆ ಲೋಕದಲ್ಲಿ ಹೊಸ ಕ್ರಾಂತಿ ಉಂಟು ಮಾಡಿದೆ ಎಂದು ಅವರು ತಿಳಿಸಿದರು.

ಸಂಸ್ಥೆಯ ಸಾಧನೆಯ ಬಗ್ಗೆ ಮಾತನಾಡಿದ ಪ್ರಧಾನ ವ್ಯವಸ್ಥಾಪಕ ಅಲಿ ಝೈದಿ, ಸಂಸ್ಥೆಯು ಈ ಐದು ವರ್ಷಗಳಲ್ಲಿ ಅನೇಕ ಸವಾಲುಗಳನ್ನು ಎದುರಿಸಿ ವಿಮೆ ಕ್ಷೇತ್ರದಲ್ಲಿ ಅಗ್ರಸ್ಥಾನಕ್ಕೇರಿದೆ ಎಂದು ತಿಳಿಸಿದರು.

ಆಫಿಯಾ ಒಂದು ಆರೋಗ್ಯ ಸೇವೆ ವೇದಿಕೆಯಾಗಿದ್ದು ವಿಮೆ ಕಂಪೆನಿಗಳು, ವೈದ್ಯಕೀಯ ಸೇವೆ ಪೂರೈಕೆದಾರರು (ಆಸ್ಪತ್ರೆಗಳು, ಕ್ಲಿನಿಕ್‌ಗಳು ಮತ್ತು ಫಾರ್ಮಸಿಗಳು), ನಿಯಂತ್ರಕ ಸಂಸ್ಥೆಗಳು ಮತ್ತು ವಿಮಾದಾರರ ನಡುವೆ ಸಂಪರ್ಕ ಸಾಧಿಸುವ ಮಾಧ್ಯಮದಂತೆ ವರ್ತಿಸಿ ಆರೋಗ್ಯ ಸೇವೆ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News