ರಕ್ತದಾನ ಮಾಡುವ ಮೂಲಕ ಜೀವವನ್ನು ಉಳಿಸಲು ಸಾಧ್ಯ: ಮುಹಮ್ಮದ್ ಇಸ್ಮಾಯಿಲ್

Update: 2018-12-15 12:44 GMT

ದುಬೈ, ಡಿ. 15: ಕರ್ನಾಟಕ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ದುಬೈ ಮತ್ತು ಕಮ್ಯುನಿಟಿ ಡೆವಲಪ್ಮೆಂಟ್ ಅಥಾರಿಟಿ ದುಬೈ ಪ್ರಾಯೋಜಕತ್ವದಲ್ಲಿ ದುಬೈ ಹೆಲ್ತ್ ಅಥಾರಿಟಿ ಸಹಯೋಗದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಸಹಕಾರದೊಂದಿಗೆ ದುಬೈಯ ಲತೀಫಾ ಹಾಸ್ಪಿಟಲ್ ನಲ್ಲಿ ಶುಕ್ರವಾರ ರಕ್ತದಾನ ಶಿಬಿರ ನಡೆಯಿತು.

ಕರ್ನಾಟಕ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ದುಬೈ ಇದರ ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ನಂತರ ಮಾತನಾಡಿದ ಅವರು ರಕ್ತವನ್ನು ಯಾರಿಂದಲೂ ಉತ್ಪಾದಿಸಲು ಸಾಧ್ಯವಿಲ್ಲ. ರಕ್ತದಾನ ಮಾಡುವ ಮೂಲಕವೇ ಒಂದು ಜೀವವನ್ನು ಉಳಿಸಲು ಸಾಧ್ಯ ಹಾಗೂ ರಕ್ತದಾನ ಮಾಡಿದ ಮೇಲೆ ಆಗುವಂತಹ ಲಾಭದಾಯಕ ಅಂಶಗಳನ್ನು ವಿವರಿಸಿದರು.

ಮುಖ್ಯ ಅತಿಥಿಗಳಾಗಿ ಎಸ್ ಕೆ ಸಮೀರ್, ರಶೀದ್ ಬ್ಯಾರಿ (ರಾಶ್ ಬ್ಯಾರಿ), ಸಂಶುದ್ದೀನ್ ಪಿಲಿಗೂಡು, ನಝೀರ್ ಬಿಕರ್ನಕಟ್ಟೆ, ಸಮೀರ್ ಕಡವಿನ ಬಾಗಿಲು, ಕೆ ಎಸ್ ಸಿ ಸಿ ಮ್ಯಾನೇಜರ್ ಮುಹಮ್ಮದ್ ಶಾಫಿ, ಉದ್ಯಮಿ ಅಶ್ರಫ್ ಖಾನ್ ಹಾಗು ಲತೀಫ್ ಮುಲ್ಕಿ ಉಪಸ್ಥಿತರಿದ್ದರು.

ಶಿಬಿರದಲ್ಲಿ ಸುಮಾರು 135 ಮಂದಿ ರಕ್ತದಾನ ಮಾಡಿದರು. ಮುಹಮ್ಮದ್ ಫರಾಝ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News