13 ವರ್ಷದ ಭಾರತೀಯ ಬಾಲಕ ದುಬೈಯಲ್ಲಿ ಸಾಫ್ಟ್‌ವೇರ್ ಕಂಪನಿಯ ಮಾಲಕ!

Update: 2018-12-16 15:21 GMT

ದುಬೈ, ಡಿ.16: ನಾಲ್ಕು ವರ್ಷಗಳ ಹಿಂದೆ ತನ್ನ ಮೊದಲ ಮೊಬೈಲ್ ಆ್ಯಪ್ ಅಭಿವೃದ್ಧಿಗೊಳಿಸಿದ್ದ ದುಬೈ ನಿವಾಸಿ ಭಾರತೀಯ ಬಾಲಕ ಆದಿತ್ಯನ್ ರಾಜೇಶ್ ತನ್ನ ಸ್ವಂತದ ಸಾಫ್ಟ್‌ವೇರ್ ಅಭಿವೃದ್ಧಿ ಕಂಪನಿಯನ್ನೂ ಹೊಂದಿದ್ದಾನೆ.

ತನ್ನ ಒಂಭತ್ತರ ಹರೆಯದಲ್ಲಿ ಬೇಜಾರು ಕಳೆಯಲೆಂದು ಮೊದಲ ಮೊಬೈಲ್ ಆ್ಯಪ್ ಅಭಿವೃದ್ಧಿಗೊಳಿಸಿದ್ದ ಕೇರಳ ಮೂಲದ ಆದಿತ್ಯನ್ ತನ್ನ ಗ್ರಾಹಕರಿಗಾಗಿ ಲಾಂಛನಗಳನ್ನು ಮತ್ತು ವೆಬ್‌ಸೈಟ್‌ಗಳನ್ನೂ ಅಭಿವೃದ್ಧಿಗೊಳಿಸುತ್ತಿದ್ದಾನೆ.

 ಐದನೇ ವಯಸ್ಸಿನಲ್ಲಿಯೇ ಕಂಪ್ಯೂಟರ್ ಬಳಕೆಯನ್ನು ಆರಂಭಿಸಿದ್ದ ರಾಜೇಶ್ ತನ್ನ 13ನೆಯ ವಯಸ್ಸಿನಲ್ಲಿ ‘ತ್ರಿನೇತ್ ಸೊಲ್ಯೂಷನ್ಸ್’ ಹೆಸರಿನಲ್ಲಿ ತನ್ನದೇ ಆದ ಕಂಪನಿಯನ್ನು ಸ್ಥಾಪಿಸಿದ್ದಾನೆ.

 ‘ನಾನು ಕೇರಳದ ತಿರುವಿಲ್ಲದಲ್ಲಿ ಹುಟ್ಟಿದ್ದು,ನನಗೆ ಐದು ವರ್ಷವಾದಾಗ ನನ್ನ ಕುಟುಂಬವು ಇಲ್ಲಿಗೆ ಬಂದಿತ್ತು. ಬಿಬಿಸಿ ಟೈಪಿಂಗ್ ನನ್ನ ತಂದೆ ನನಗೆ ತೋರಿಸಿದ್ದ ಮೊದಲ ವೆಬ್‌ಸೈಟ್ ಆಗಿತ್ತು. ಈ ವೆಬ್‌ಸೈಟ್ ಮೂಲಕ ಎಳೆಯ ಮಕ್ಕಳು ಟೈಪಿಂಗ್ ಕಲಿಯಬಹುದಾಗಿದೆ ’’ಎಂದು ಸುದ್ದಿಗಾರರೊಡನೆ ಮಾತನಾಡಿದ ಆದಿತ್ಯನ್ ಹೇಳಿದ.

ತ್ರಿನೇತ್ ಮೂವರು ಉದ್ಯೋಗಿಗಳನ್ನು ಹೊಂದಿದ್ದು,ಇವರೆಲ್ಲ ಆದಿತ್ಯನ್‌ನ ಸ್ನೇಹಿತರು ಮತ್ತು ಶಾಲಾ ಸಹಪಾಠಿಗಳಾಗಿದ್ದಾರೆ.

ಪರಿಪೂರ್ಣ ಕಂಪನಿಯ ಮಾಲಿಕನೆನಿಸಿಕೊಳ್ಳಲು ಆದಿತ್ಯನ್‌ಗೆ 18 ವರ್ಷವಾಗಬೇಕಿದೆ. ಆದರೆ ಆತನ ತಂಡ ಈಗಾಗಲೇ ಕಂಪನಿಯಂತೆ ಕಾರ್ಯ ನಿರ್ವಹಿಸುತ್ತಿದೆ. ಅದು 12ಕ್ಕೂ ಅಧಿಕ ಗ್ರಾಹಕರಿಗೆ ವಿನ್ಯಾಸಗಳು ಮತ್ತು ಕೋಡಿಂಗ್ ಸೇವೆಗಳನ್ನು ಸಂಪೂರ್ಣ ಉಚಿತವಾಗಿ ಒದಗಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News