ಖಶೋಗಿ ಹತ್ಯೆಯ ಬಗ್ಗೆ ವಿಶ್ವಸನೀಯ ತನಿಖೆಗೆ ವಿಶ್ವಸಂಸ್ಥೆ ಕಾರ್ಯದರ್ಶಿ ಕರೆ

Update: 2018-12-16 17:16 GMT
ಜಮಾಲ್ ಖಶೋಗಿ

ದೋಹಾ, ಡಿ.16: ಟರ್ಕಿಯ ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ಕಾನ್ಸುಲೇಟ್‌ನಲ್ಲಿ ಪತ್ರಕರ್ತ ಜಮಾಲ್ ಖಶೋಗಿ ಅವರ ಕೊಲೆ ಪ್ರಕರಣದ ಬಗ್ಗೆ ‘ವಿಶ್ವಸನೀಯ’ವಾದ ತನಿಖೆಯಾಗಬೇಕೆಂದು ವಿಶ್ವಸಂಸ್ಥೆ ವರಿಷ್ಠ ಆ್ಯಂಟೊನಿಯೊ ಗುಟೆರಸ್ ರವಿವಾರ ಕರೆ ನೀಡಿದ್ದಾರೆ.

ದೋಹಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ‘‘ ಖಶೋಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ವಿಶ್ವಸನೀಯವಾದ ತನಿಖೆ ನಡೆಯಬೇಕಿರುವುದು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕಿರುವುದು ತುಂಬಾ ಅಗತ್ಯ’’ ಎಂದು ಪ್ರತಿಪಾದಿಸಿದ್ದಾರೆ.

ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಬಿಟ್ಟರೆ, ತನಿಗೆ ಈ ಪ್ರಕರಣದ ಬಗ್ಗೆ ಯಾವುದೇ ಮಾಹಿತಿಯಿಲ್ಲವೆಂದು ವಿಶ್ವಸಂಸ್ಥೆ ವರಿಷ್ಠರು ಹೇಳಿದ್ದಾರೆ.

ವಾಶಿಂಗ್ಟನ್ ಪೋಸ್ಟ್ ಪತ್ರಿಕೆಯ ವರದಿಗಾರರಾದ ಖಶೋಗಿ, ಅಕ್ಟೋಬರ್ 2ರಂದು ಇಸ್ತಾಂಬುಲ್‌ನಲ್ಲಿರುವ ಸೌದಿ ಆರೇಬಿಯದ ಕಾನ್ಸುಲೇಟ್‌ನೊಳಗೆ ತೆರಳಿದ ಬಳಿಕ ಕೊಲೆಯಾಗಿದ್ದರು. ಆದರೆ ಖಶೋಗಿ ಕೊಲೆ ಪ್ರಕರಣದ ಶಂಕಿತ ಆರೋಪಿಗಳನ್ನು ಗಡಿಪಾರು ಮಾಡಬೇಕೆಂಬ ಟರ್ಕಿಯ ಬೇಡಿಕೆಗಳನ್ನು ಸೌದಿ ಅರೇಬಿಯ ತಿರಸ್ಕರಿಸುತ್ತಲೇ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News