ಎರಡು ಮೆನಾ ಪ್ರಶಸ್ತಿಗಳನ್ನು ಪಡೆದ ದುಬೈ ಡ್ಯೂಟಿ ಫ್ರೀ

Update: 2018-12-18 17:36 GMT

ದುಬೈ, ಡಿ.18: ಡಿಸೆಂಬರ್ 13ರಂದು ಬುರ್ಜ್ ಅಲ್ ಅರಬ್‌ನಲ್ಲಿ ನಡೆದ ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾ ಮತ್ತು ಏಶ್ಯಾ (ಮೆನಾ)ದ ಅತ್ಯುತ್ತಮ ನಾಯಕತ್ವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದುಬೈ ಡ್ಯೂಟಿ ಫ್ರೀ ಎರಡು ಪ್ರತಿಷ್ಟಿತ ಪ್ರಶಸ್ತಿಗಳನ್ನು ತನ್ನದಾಗಿಸಿದೆ.

ವಿಮಾನ ನಿಲ್ದಾಣದ ಮಳಿಗೆಯಾಗಿರುವ ದುಬೈ ಡ್ಯೂಟಿ ಫ್ರೀ ಎರಡನೇ ಬಾರಿ ಗ್ರಾಹಕರ ಸಂತೋಷ ಪ್ರಶಸ್ತಿ ಪಡೆದರೆ ಅದರ ಕಾರ್ಯಕಾರಿ ಸಹಾಯಕ ಮುಖ್ಯಸ್ಥ ಮತ್ತು ಸಿಇಒ ಕಾಲ್ಮ್ ಮ್ಯಾಕ್‌ಲೋವ್ಲಿನ್ ಮೂರನೇ ಬಾರಿ ಅತ್ಯುತ್ತಮ ಉದ್ಯಮ ನಾಯಕತ್ವ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಮಾತನಾಡಿದ ಕಾಲ್ಮ್, ಮೂರನೇ ಬಾರಿ ಅತ್ಯುತ್ತಮ ಉದ್ಯಮ ನಾಯಕತ್ವ ಪ್ರಶಸ್ತಿ ಪಡೆಯಲು ಸಂತೋಷವಾಗುತ್ತದೆ. ಈ ಪ್ರಶಸ್ತಿಯನ್ನು ಮುಖ್ಯಸ್ಥ ಎಚ್.ಎಚ್ ಶೇಕ್ ಅಹ್ಮದ್ ಬಿನ್ ಸಯೀದ್ ಅಲ್ ಮಕ್ತೂಮ್ ಅವರಿಗೆ ಅರ್ಪಿಸುವುದಾಗಿ ಹೇಳಿದ್ದಾರೆ. ಗ್ರಾಹಕ ಸಂತೋಷ ಪ್ರಶಸ್ತಿ ಬಂದಿರುದೂ ಜಗತ್ತಿನಲ್ಲೇ ಅತ್ಯುತ್ತಮವಾಗಿರುವ ನಮ್ಮ ಸಿಬ್ಬಂದಿ ವರ್ಗದ ಶ್ರಮ ಮತ್ತು ಬದ್ಧತೆಗೆ ಸಂದ ಗೌರವವಾಗಿದೆ ಎಂದು ಅವರು ತಿಳಿಸಿದ್ದಾರೆ.

200 ಹಿರಿಯ ಪ್ರಾದೇಶಿಕ ಅಧಿಕಾರಿಗಳು ಭಾಗಿಯಾಗಿದ್ದ ಸಮಾರಂಭದಲ್ಲಿ ಮಧ್ಯ ಪ್ರಾಚ್ಯ, ಉತ್ತರ ಆಫ್ರಿಕಾ ಮತ್ತು ಏಶ್ಯಾದ ಎಲ್ಲ ಕ್ಷೇತ್ರಗಳ ಉದ್ಯಮ ಶೀಲತೆಗೆ ಪ್ರಶಸ್ತಿಯ ಮೂಲಕ ಗೌರವ ಸಲ್ಲಿಸಲಾಯಿತು. ಕಾಲ್ಮ್ ಜೊತೆಗೆ ಆಥಿತ್ಯ, ಆರೋಗ್ಯಸೇವೆ, ಕೈಗಾರಿಕೆ, ವೈಮಾನಿಕ,ತಂತ್ರಜ್ಞಾನ, ಐಟಿ, ಮಾರ್ಕೆಟಿಂಗ್ ಮತ್ತು ಬ್ಯಾಂಕಿಂಗ್ ಕ್ಷೇತ್ರದ ಪ್ರಶಸ್ತಿ ಪುರಸ್ಕೃತರನ್ನು ಮೆನಾ ಅಂತಿಮಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News