‘ಫ್ಲೈದುಬೈ’ನಿಂದ ಕಲ್ಲಿಕೋಟೆಗೆ ನೇರ ವಿಮಾನ ಸಂಪರ್ಕ

Update: 2018-12-20 16:44 GMT

ದುಬೈ, ಡಿ. 20: ದುಬೈಯ ವಿಮಾನಯಾನ ಸಂಸ್ಥೆ ‘ಫ್ಲೈದುಬೈ’ ಕೇರಳದ ಕಲ್ಲಿಕೋಟೆಗೆ ನೇರ ವಿಮಾನಗಳನ್ನು ಹಾರಿಸುವುದಾಗಿ ಘೋಷಿಸಿದೆ.

ವಿಮಾನವು 2019 ಫೆಬ್ರವರಿ 1ರಿಂದ ವಾರಕ್ಕೆ ಮೂರು ಸಲ ದುಬೈ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಲ್ಲಿಕೋಟೆ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾರಲಿದೆ.

‘ಫ್ಲೈದುಬೈ’ ಈ ಮಾರ್ಗದಲ್ಲಿ ಹಾರಾಟ ನಡೆಸಲಿರುವ ದುಬೈಯ ಮೊದಲ ವಿಮಾನಯಾನ ಸಂಸ್ಥೆಯಾಗಿದೆ.

ದುಬೈಯಿಂದ ಕಲ್ಲಿಕೋಟೆಗೆ ಹೋಗಿ-ಬರುವ ‘ಬಿಝ್ನೆಸ್ ಕ್ಲಾಸ್’ ದರ 2,659 ದಿರ್ಹಮ್ (ಸುಮಾರು 54,075 ರೂಪಾಯಿ)ನಿಂದ ಆರಂಭಗೊಂಡರೆ, ಹೋಗಿ-ಬರುವ ಮಿತವ್ಯಯ ದರ್ಜೆ (ಎಕಾನಮಿ ಕ್ಲಾಸ್)ಯ ದರ 670 ದಿರ್ಹಮ್ (ಸುಮಾರು 13,000 ರೂಪಾಯಿ)ನಿಂದ ಆರಂಭಗೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News