ಮರ್ಕಝ್ ತಅ್ ಲೀಮಿಲ್ ಇಹ್ಸಾನ್ ಭವಿಷ್ಯದ ಯೂನಿವರ್ಸಿಟಿಯಾಗಲಿದೆ : ವಿನಯ ಕುಮಾರ್ ಸೊರಕೆ

Update: 2018-12-23 10:27 GMT

ರಿಯಾದ್, ಡಿ. 23: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಅಧೀನದಲ್ಲಿರುವ ಮರ್ಕಝ್ ತಅಕ್ ಲೀಮಿಲ್ ಇಹ್ಸಾನ್ ವಿದ್ಯಾ ಸಂಸ್ಥೆಯು ಭವಿಷ್ಯದ ಯೂನಿವರ್ಸಿಟಿಯಾಗಲಿದೆ ಎಂದು  ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.

ಅವರು ಸೌದಿ ಅರೇಬಿಯಾದ ಜುಬೈಲ್ ನಲ್ಲಿ  ಡಿಕೆಎಸ್ ಸಿ ಜುಬೈಲ್ ದ್ವಿಘಟಕಗಳು ಆಯೋಜಿಸಿದ್ದ ಫ್ಯಾಮಿಲಿ ಸ್ನೇಹ ಸಮ್ಮಿಲನದ ಮುಖ್ಯ ಅತಿಥಿಯಾಗಿ ಮಾತಾಡಿದರು. ಡಿಕೆಎಸ್ ಸಿಯ ಅಧೀನದಲ್ಲಿರುವ ಮರ್ಕಝ್ ತಅ್ ಲೀಮಿಲ್ ಇಹ್ಸಾನ್ ಹಾಗೂ ಅದರ ಕಾರ್ಯಚಟುವಟಿಕೆಗಳನ್ನು ತಾನು ಅತೀ ಹತ್ತಿರದಿಂದ ಬಲ್ಲವನಾಗಿದ್ದು, ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಶಕ್ತಿ ಮೀರಿ ಪ್ರಯತ್ನಿಸುವೆನೆಂದು ತಿಳಿಸಿದರು.

ಸಮಾರಂಭದ ಇನ್ನೋರ್ವ ಮುಖ್ಯ ಅಥಿತಿ, ಸಮಾಜ ಸೇವಕ ಮಿಸ್ಬಾಹ್ ಮಹಿಳಾ  ಕಾಲೇಜಿನ ಅಧ್ಯಕ್ಷ  ಬಿಎಂ ಮುಮ್ತಾಝ್ ಅಲಿ ಅವರು ಕೊಲ್ಲಿ ರಾಷ್ಟ್ರಗಳಲ್ಲಿ ಕಾರ್ಯಾಚರಿಸುತ್ತಿರುವ ಡಿಕೆಎಸ್ ಸಿಯ ಎಲ್ಲಾ ಪ್ರವರ್ತಕರನ್ನು ಅವರ ಸಾಧನೆಗೆ ಮುಕ್ತ ಕಂಠದಿಂದ ಶ್ಲಾಗಿಸಿ, ಮರ್ಕಝ್ ತಅ್ ಲೀಮಿಲ್ ಇಹ್ಸಾನ್ ವಿದ್ಯಾ ಸಂಸ್ಥೆಯು ಸಲ್ಲಿಸುವ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಡಿಕೆಎಸ್ ಸಿಯ ಪೋಷಕರಲ್ಲೊಬ್ಬರೂ, ಕೇಂದ್ರ ಸಮಿತಿಯ ಮುಖ್ಯ ಸಲಹೆಗಾರರೂ ಹಾಗೂ ಕೊಡುಗೈ ದಾನಿ  ಝಕರಿಯಾ ಸಂಘಟನೆಗೆ ಎಲ್ಲರ ಸಹಕಾರವನ್ನು ಅಪೇಕ್ಷಿಸಿ  ಮುಂದಿನ ದಿನಗಳಲ್ಲಿ ಮರ್ಕಝ್ ತಅ್ ಲೀಮಿಲ್ ಇಹ್ಸಾನ್  ವಿದ್ಯಾ ಸಂಸ್ಥೆಯು ಎಲ್ಲಾ ವಿದ್ಯಾಲಯಗಳ ಕೇಂದ್ರ ಬಿಂದುವಾಗಲೆಂದು ಹಾರೈಸಿದರು.

ಪ್ರತಿಷ್ಠಿತ ಎಕ್ಸ್ಪರ್ಟೈಸ್ ಕಂಪನಿಯ ಆಡಳಿತ ನಿರ್ದೇಶಕರಾದ  ಅಶ್ರಫ್ ಕರ್ನಿರೆ ಮಾತನಾಡಿ, ಮರ್ಕಝ್ ತಅ್ ಲೀಮಿಲ್ ಇಹ್ಸಾನ್ ಸಂಸ್ಥೆಯು ವಿದ್ಯಾಭ್ಯಾಸಕ್ಕೆ ಕೊಡುವ ಮಹತ್ವವನ್ನು ಪ್ರಶಂಶಿಸಿ, ಸಂಸ್ಥೆಯ ಬೆಳವಣಿಗೆಗೆ ಸದಾ ನಿಮ್ಮೊಂದಿಗಿರುವೆನೆಂದು ಭರವಸೆ ನೀಡಿದರು.

ಸಮಾರಂಭದ ಅಥಿತಿಗಳನ್ನು   ಡಿಕೆಎಸ್ ಸಿ  ಕೇಂದ್ರ ಸಮಿತಿಯ ಉಪಾಧ್ಯಕ್ಷ ಕೆ.ಎಚ್. ಮುಹಮ್ಮದ್ ರಫೀಕ್ ಸೂರಿಂಜೆ ಸ್ವಾಗತಿಸಿದರು. ಕೇಂದ್ರ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಯು.ಡಿ. ಅಬ್ದುಲ್ ಹಮೀದ್ ಉಳ್ಳಾಲ್ ಅವರು ಸಮಾರಂಭವನ್ನು ಉದ್ಘಾಟಿಸಿದರು.

ಅಲ್-ಮುಝೈನ್ ಗ್ರೂಪಿನ ಆಡಳಿತ ನಿರ್ದೇಶಕ ಬಿಎಂ ಶರೀಫ್ ರೈಸ್ಕೊ ಗ್ರೂಪಿನ ಆಡಳಿತ ನಿರ್ದೇಶಕ ಅಬೂಬಕರ್ ಪಡುಬಿದ್ರೆ, ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಸನ್ ಮೂಡುತೋಟ, ದಮಾಮ್ ವಲಯ ಸಮಿತಿಯ ಅಧ್ಯಕ್ಷ ಹಸನ್ ಬಾವ ಕುಪ್ಪೆಪದವು ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಅಬ್ದುಲ್ ಹಮೀದ್ ಕಾಪು ವಹಿಸಿದ್ದರು.

ತನ್ನ ಸುದೀರ್ಘ ಪ್ರವಾಸಿ ಜೀವನಕ್ಕೆ ವಿದಾಯಕೊಟ್ಟು ತಾಯ್ನಾಡಿಗೆ ಮರಳುವ ಡಿಕೆಎಸ್ ಸಿ ಕೇಂದ್ರ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ಅನ್ವರ್ ಹುಸೈನ್ ಗೂಡಿನಬಳಿ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.

ಈ ಸಂದರ್ಭ ನಡೆದ ಮಕ್ಕಳ ಶೈಕ್ಷಣಿಕ ಸ್ಪರ್ಧಾ ಕಾರ್ಯಕ್ರಮಗಳನ್ನು ಇಸ್ಮಾಯಿಲ್ ಕಾಟಿಪಳ್ಳ ಹಾಗೂ ಅಬ್ದುಲ್ ರಹ್ಮಾನ್ ಪಾಣಾಜೆ ಅವರು ನೆರವೇರಿಸಿ ದರು. ಕೆಸಿಎಫ್ ತಂಡವು  ದಫ್ ಕಾರ್ಯಕ್ರಮವನ್ನು ನೆರವೇರಿಸಿದರು.

 ಇಕ್ಬಾಲ್ ಮಳ್ಳೂರ್ ಹಾಗೂ ಕಮರುದ್ದೀನ್ ಗೂಡಿನಬಳಿ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ಗಫೂರ್ ಸಜಿಪ ವಂದಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News