×
Ad

ಟಿವಿ ನಿರೂಪಕನಿಂದ ಪ್ರವಾದಿ ನಿಂದನೆ: ಕೆಸಿಎಫ್ ಒಮಾನ್ ಖಂಡನೆ

Update: 2018-12-29 22:41 IST

ಒಮಾನ್,ಡಿ.29: ಪ್ರವಾದಿ ಮುಹಮ್ಮದ್ (ಸ) ರವರನ್ನು ಟಿವಿ ನಿರೂಪಕರೋರ್ವರು ಅನಗತ್ಯವಾಗಿ ಚರ್ಚೆಯೊಂದರಲ್ಲಿ ಎಳೆದು ತಂದು ನಿಂದನೆ ಮಾಡಿರುವುದು ಖಂಡನೀಯ ಎಂದು ಕರ್ನಾಟಕ ಕಲ್ಚರಲ್ ಫೌಂಡೇಶನ್ ಒಮಾನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಸಯ್ಯಿದ್ ಆಬಿದ್ ಅಲ್ ಹೈದ್ರೋಸಿ ಹೇಳಿದ್ದಾರೆ.

ಸಾಹಿತಿ ಪ್ರೊ. ಭಗವಾನ್ ರವರು ರಾಮಾಯಣಕ್ಕೆ ಸಂಬಂಧಿಸಿ ಬರೆದ ಕೃತಿಯಲ್ಲಿ ಸಮುದಾಯದ ಭಾವನೆಗೆ ಧಕ್ಕೆ ತರುವಂತಹ ವಿಚಾರಗಳಿದ್ದರೆ ಅದು ಖಂಡನೀಯ. ಆದರೆ ಈ ಕುರಿತು ಚರ್ಚೆಯಲ್ಲಿ ಪ್ರವಾದಿ ಮುಹಮ್ಮದ್ (ಸ.ಅ)ರವರ ಹೆಸರನ್ನು ಎಳೆದು ತಂದು ಅನಗತ್ಯವಾಗಿ ಧರ್ಮ ಧರ್ಮಗಳ ನಡುವೆ ಕೋಮು ಭಾವನೆಗಳನ್ನು ಸೃಷ್ಟಿಸುವುದಕ್ಕಾಗಿ ಇಂತಹ ನಿಂದನಾತ್ಮಕ ಚರ್ಚೆಯನ್ನು ನಡೆಸುತ್ತಿದೆ. ಇಂತಹ ಮಾಧ್ಯಮಗಳನ್ನು ಸಮಾಜ ಬಹಿಷ್ಕರಿಸಬೇಕಾಗಿದೆ ಎಂದು ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News