ಅರಬ್ ಜಗತ್ತಿನ ಪರಂಪರೆ ಬಿಚ್ಚಿಡುವ ‘ಜಿದ್ದಾ ಪುಸ್ತಕ ಮೇಳ’

Update: 2019-01-02 16:04 GMT

ಜಿದ್ದಾ (ಸೌದಿ ಅರೇಬಿಯ), ಜ. 2: ಸೌದಿ ಅರೇಬಿಯದಲ್ಲಿ ನಡೆಯುತ್ತಿರುವ ನಾಲ್ಕನೇ ‘ಜಿದ್ದಾ ಅಂತಾರಾಷ್ಟ್ರೀಯ ಪುಸ್ತಕ ಮೇಳ’ದಲ್ಲಿ ಜೋರ್ಡಾನ್, ಸುಡಾನ್, ಯೆಮನ್ ಸೇರಿದಂತೆ ಹತ್ತಾರು ಅರಬ್ ಮತ್ತು ಇಸ್ಲಾಮಿಕ್ ದೇಶಗಳು ಭಾಗವಹಿಸುತ್ತಿವೆ.

10 ದಿನಗಳ ಪುಸ್ತಕ ಮೇಳವನ್ನು ಮಕ್ಕಾ ಗವರ್ನರ್ ರಾಜಕುಮಾರ ಖಾಲಿದ್ ಅಲ್-ಫೈಸಲ್ ಡಿಸೆಂಬರ್ 27ರಂದು ಉದ್ಘಾಟಿಸಿದ್ದಾರೆ. ಅದು ಜನವರಿ 5ರಂದು ಕೊನೆಗೊಳ್ಳಲಿದೆ.

ಪ್ರತಿ ದಿನ ಸುಮಾರು 50,000 ಜನರು ಭೇಟಿ ನೀಡುತ್ತಿದ್ದಾರೆ. ಇಲ್ಲಿ ಪ್ರತಿ ದಿನ ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಮನರಂಜನಾ ಕಾರ್ಯಕ್ರಮಗಳು ನಡೆಯುತ್ತಿವೆ.

ಅರಬ್ ಜಗತ್ತಿನ ಪರಂಪರೆ ಮತ್ತು ಸಂಪ್ರದಾಯಗಳನ್ನು ಅವುಗಳ ಅತ್ಯಂತ ಸುಂದರ ರೂಪಗಳಲ್ಲಿ ಪ್ರದರ್ಶಿಸುವುದು ಈ ಮೇಳದ ಉದ್ದೇಶವಾಗಿದೆ.

40 ದೇಶಗಳ ನೂರಾರು ಪ್ರಕಾಶನ ಸಂಸ್ಥೆಗಳು ಇಲ್ಲಿ ಭಾಗವಹಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News