ಶಾರ್ಜಾ: ಕೈಗಾರಿಕಾ ಪ್ರದೇಶದ ಉಗ್ರಾಣದಲ್ಲಿ ಭಾರೀ ಬೆಂಕಿ
Update: 2019-01-02 21:36 IST
ಶಾರ್ಜಾ, ಜ. 2: ಶಾರ್ಜಾ ಕೈಗಾರಿಕಾ ಪ್ರದೇಶ ‘1’ರ ಪೀಠೋಪಕರಣ ಉಗ್ರಾಣದಲ್ಲಿ ಹೊತ್ತಿಕೊಂಡ ಬೃಹತ್ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಶಾರ್ಜಾ ನಾಗರಿಕ ರಕ್ಷಣೆ ವಿಭಾಗದ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಅಗ್ನಿ ದುರಂತದಲ್ಲಿ ಯಾರಿಗೂ ಗಾಯವಾಗಿಲ್ಲ. ಆದರೆ, ಈ ಪ್ರದೇಶದ ಆಕಾಶವನ್ನು ಭಾರೀ ಹೊಗೆ ಆವರಿಸಿದ್ದು, ಶಾರ್ಜಾ ನಿವಾಸಿಗಳು ಆತಂಕಗೊಂಡಿದ್ದಾರೆ.
ಬುಧವಾರ ರಾತ್ರಿ 9:58ಕ್ಕೆ ಬೆಂಕಿ ಅಪಘಾತದ ಬಗ್ಗೆ ಮಾಹಿತಿ ಬಂದಿದೆ ಎಂದು ನಾಗರಿಕ ರಕ್ಷಣೆ ಅಧಿಕಾರಿಗಳು ಹೇಳಿದ್ದಾರೆ.
ಸಮ್ನಾನ್ ಮತ್ತು ಅಲ್-ಮಿನಾ ಅಗ್ನಿಶಾಮಕ ಠಾಣೆಗಳ ಅಗ್ನಿಶಾಮಕರು 5 ನಿಮಿಷದ ಒಳಗೆ ಸ್ಥಳವನ್ನು ತಲುಪಿದ್ದಾರೆ ಹಾಗೂ ಬೆಂಕಿಯ ಜ್ವಾಲೆಗಳನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.