ಅಬುಧಾಬಿಯಲ್ಲಿ 28 ಕೋಟಿ ರೂ. ಗೆದ್ದ ಭಾರತೀಯ
Update: 2019-01-03 22:24 IST
ಅಬುಧಾಬಿ, ಜ. 3: ಗುರುವಾರ ನಡೆದ ಬಿಗ್ ಟಿಕೆಟ್ ಅಬುಧಾಬಿ ಲಾಟರಿ ಡ್ರಾದಲ್ಲಿ ಭಾರತೀಯರೊಬ್ಬರು 15 ಮಿಲಿಯ ದಿರ್ಹಮ್ (28.65 ಕೋಟಿ ರೂಪಾಯಿ) ಬಹುಮಾನ ಗೆದ್ದಿದ್ದಾರೆ.
ಎಂದಿನಂತೆ, ಅಗ್ರ 10 ವಿಜೇತರ ಪೈಕಿ ಹೆಚ್ಚಿನವರು ಭಾರತೀಯರು.ಶರತ್ ಪುರುಶೋತ್ತಮನ್ 28.65 ಕೋಟಿ ರೂ. ಬಹುಮಾನ ಗೆದ್ದವರು.
ಎರಡನೇ ಪ್ರಶಸ್ತಿಯನ್ನು ಇನ್ನೋರ್ವ ಭಾರತೀಯ ಜಿನಚಂದ್ರನ್ ವಝೂರ್ ನಾರಾಯಣನ್ ಗೆದ್ದಿದ್ದಾರೆ. ಅವರು ಗೆದ್ದ ಮೊತ್ತ 1 ಲಕ್ಷ ದಿರ್ಹಮ್ (19 ಲಕ್ಷ ರೂಪಾಯಿ).
ಇಂದಿನ ಲಾಟರಿಯನ್ನು ಗೆದ್ದವರಲ್ಲಿ 8 ಮಂದಿ ಭಾರತೀಯರು, ಓರ್ವ ಪಾಕಿಸ್ತಾನಿ ಮತ್ತು ಓರ್ವ ಫಿಜಿ ರಾಷ್ಟ್ರೀಯ ಸೇರಿದ್ದಾರೆ.