5 ಆರೋಪಿಗಳಿಗೆ ಮರಣದಂಡನೆಗೆ ಕೋರಿಕೆ: ಸೌದಿ ಪ್ರಾಸಿಕ್ಯೂಟರ್

Update: 2019-01-04 15:03 GMT

ದುಬೈ, ಜ. 4: ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಗೆ ಸಂಬಂಧಿಸಿ ಐವರು ಆರೋಪಿಗಳಿಗೆ ತಾವು ಮರಣ ದಂಡನೆ ಕೋರುವುದಾಗಿ ಸೌದಿ ಅರೇಬಿಯದ ಪ್ರಾಸಿಕ್ಯೂಟರ್ ‌ಗಳು ಹೇಳಿದ್ದಾರೆ.

ಹತ್ಯೆಯಲ್ಲಿ ಭಾಗಿಯಾದ ಆರೋಪ ಹೊತ್ತಿರುವ 11 ಆರೋಪಿಗಳನ್ನು ಗುರುವಾರ ನ್ಯಾಯಾಲಯವೊಂದಕ್ಕೆ ಹಾಜರುಪಡಿಸಲಾಯಿತು.

ಆರೋಪಿಗಳ ವಿಚಾರಣೆ ಮುಂದುವರಿಯುವುದು ಎಂದು ಸೌದಿ ಜನರಲ್ ಪ್ರಾಸಿಕ್ಯೂಶನ್ ತಿಳಿಸಿದೆ.

ಹೆಚ್ಚಿನ ಪುರಾವೆಗಳನ್ನು ನೀಡುವಂತೆ ಕೋರುವ ಎರಡು ಮನವಿಗಳನ್ನು ಟರ್ಕಿಗೆ ಕಳುಹಿಸಲಾಗಿದೆ.

‘‘ಈವರೆಗೆ ಯಾವುದೇ ಪ್ರತಿಕ್ರಿಯೆ ಲಭಿಸಿಲ್ಲ ಹಾಗೂ ಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿ ಉತ್ತರಕ್ಕಾಗಿ ಕಾಯುತ್ತಿದೆ’’ ಎಂದು ಪ್ರಾಸಿಕ್ಯೂಟರ್‌ಗಳು ನೀಡಿದ ಹೇಳಿಕೆಯೊಂದು ತಿಳಿಸಿದೆ.

ಅಕ್ಟೋಬರ್ 2ರಂದು ಟರ್ಕಿಯ ನಗರ ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಗೆ ತನ್ನ ಮದುವೆ ದಾಖಲೆಪತ್ರಗಳನ್ನು ತರಲು ಹೋಗಿದ್ದ ಖಶೋಗಿಯನ್ನು 15 ಸದಸ್ಯರ ಸೌದಿ ತಂಡವು ಹತ್ಯೆ ಮಾಡಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News