ಯುಎಇ: ವ್ಯಾಪಾರಿಗಳಿಗೆ ದಂಡದಲ್ಲಿ 50 ಶೇ. ವಿನಾಯಿತಿ
ದುಬೈ, ಜ. 5: ವಾಣಿಜ್ಯಿಕ ದಂಡದ 50 ಶೇಕಡ ವಿನಾಯಿತಿಗೆ ಅರ್ಹತೆ ಹೊಂದಿರುವ ವ್ಯಾಪಾರಿಗಳಿಗಾಗಿ ಸ್ವಯಂಚಾಲಿತ ಪರಿಹಾರ ವ್ಯವಸ್ಥೆಯೊಂದನ್ನು ಜಾರಿಗೆ ತಂದಿರುವುದಾಗಿ ಯುಎಇಯ ಆರ್ಥಿಕ ಅಭಿವೃದ್ಧಿ ಇಲಾಖೆಯ ಬಳಕೆದಾರ ಹಿತರಕ್ಷಣಾ ವಿಭಾಗ ಘೋಷಿಸಿದೆ.
ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯನ್, 2019ನೇ ವರ್ಷವನ್ನು ‘ಸಹನಾ ವರ್ಷ’ ಎಂಬುದಾಗಿ ಘೋಷಿಸಿದ್ದು, ಅದಕ್ಕೆ ಅನುಗುಣವಾಗಿ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಒಂದು ಕ್ಯಾಲೆಂಡರ್ ವರ್ಷದಲ್ಲಿ ಮಾಡಿದ ಮೊದಲನೇ ತಪ್ಪಿಗೆ ಮಾತ್ರ 50 ಶೇಕಡ ವಿನಾಯಿತಿ ಅನ್ವಯವಾಗುತ್ತದೆ.
ನೂತನ ವ್ಯವಸ್ಥೆಯ ಪ್ರಕಾರ, ವಾಣಿಜ್ಯಿಕ ತಪ್ಪು ನೋಂದಣಿಗೊಂಡ ಕೂಡಲೇ ವ್ಯಾಪಾರಿಗೆ ದಂಡದಲ್ಲಿ 50 ಶೇಕಡ ವಿನಾಯಿತಿ ನೀಡುವ ಸಂದೇಶ ಬರುತ್ತದೆ.
ಹಿಂದೆ, ವ್ಯಾಪಾರಿಯು ತನ್ನ ಪ್ರಕರಣವನ್ನು ಇತ್ಯರ್ಥಪಡಿಸುವಂತೆ ವ್ಯಾಪಾರಿ ಮನವಿ ಮಾಡಬೇಕಾಗಿತ್ತು. ಆ ಬಳಿಕ, ವ್ಯಾಪಾರಿಯು ಯಾವುದೇ ವಿನಾಯಿತಿಗೆ ಅರ್ಹತೆ ಪಡೆದಿದ್ದಾನೆಯೇ ಎನ್ನುವುದರ ತಪಾಸಣೆ ಮಾಡಲಾಗುತ್ತಿತ್ತು.