ಯುಎಇ: ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಹಾಕಿದ ಯುವಕನಿಗೆ 5 ವರ್ಷ ಜೈಲು

Update: 2019-01-05 16:57 GMT

ಅಬುಧಾಬಿ, ಜ. 5: ಸಾಮಾಜಿಕ ಮಾಧ್ಯಮ ‘ಇನ್‌ಸ್ಟಾಗ್ರಾಮ್’ನಲ್ಲಿ ಶಿಕ್ಷಕರು ಮತ್ತು ಶಾಲೆಗಳ ವಿರುದ್ಧ ದ್ವೇಷ ಹರಡಿದ ಆರೋಪದಲ್ಲಿ ಅಬುಧಾಬಿಯ ಯುವಕನೊಬ್ಬನಿಗೆ 5 ವರ್ಷ ಜೈಲು ವಾಸ ಮತ್ತು 5 ಲಕ್ಷ ದಿರ್ಹಮ್ (ಸುಮಾರು 95 ಲಕ್ಷ ರೂಪಾಯಿ) ದಂಡ ವಿಧಿಸಲಾಗಿದೆ.

ಅವನ ಇನ್‌ಸ್ಟಾಗ್ರಾಮ್ ಖಾತೆಯನ್ನೂ ಮುಚ್ಚಲಾಗಿದೆ ಎಂದು ‘ಅಲ್-ಖಲೀಜ್’ ವರದಿ ಮಾಡಿದೆ.

ತಮ್ಮ ಶಿಕ್ಷಕರ ಮೇಲೆ ಹಲ್ಲೆ ನಡೆಸುವಂತೆ ವಿದ್ಯಾರ್ಥಿಗಳನ್ನು ಒತ್ತಾಯಿಸುವ ವೀಡಿಯೊವೊಂದನ್ನು ವಿಶ್ವವಿದ್ಯಾನಿಲಯವೊಂದರ ವಿದ್ಯಾರ್ಥಿಯಾಗಿರುವ ಯುವಕನು ಇನ್‌ಸ್ಟಾಗ್ರಾಂಮ್‌ನಲ್ಲಿ ಹಾಕಿದ್ದನು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News