ಇರಾನ್‌ನಲ್ಲಿ ಭೂಕಂಪ: 31 ಮಂದಿಗೆ ಗಾಯ

Update: 2019-01-07 16:01 GMT

ದುಬೈ, ಜ. 7: ಪಶ್ಚಿಮ ಇರಾನ್‌ನಲ್ಲಿ ಇರಾಕ್ ಗಡಿ ಸಮೀಪ ರವಿವಾರ ಭೂಕಂಪ ಸಂಭವಿಸಿದ್ದು, ಸುಮಾರು 31 ಮಂದಿ ಗಾಯಗೊಂಡಿದ್ದಾರೆ ಎಂದು ಸರಕಾರಿ ಸುದ್ದಿ ಸಂಸ್ಥೆ ‘ಇರ್ನ’ ವರದಿ ಮಾಡಿದೆ.

ಯುಎಸ್ ಜಿಯಾಲಜಿಕಲ್ ಸರ್ವೆ (ಯುಎಸ್‌ಜಿಎಸ್) ಆರಂಭದಲ್ಲಿ ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 5.9 ಎಂದು ಪ್ರಕಟಿಸಿತು. ಆದರೆ, ಬಳಿಕ ಅದನ್ನು 5.5ಕ್ಕೆ ಇಳಿಸಿತು.

ಕೆರ್ಮನ್‌ ಶಾ ರಾಜ್ಯದ ಗಿಲನ್ ಗಾರ್ಬ್‌ನಲ್ಲಿ ನಡೆದ ಭೂಕಂಪದಲ್ಲಿ ಗಾಯಗೊಂಡವರ ಪೈಕಿ 29 ಮಂದಿಯನ್ನು ಚಿಕಿತ್ಸೆಯ ಬಳಿಕ ಬಿಡುಗಡೆಗೊಳಿಸಲಾಗಿದೆ ಎಂದು ಇರಾನ್‌ನ ತುರ್ತು ಸೇವೆಗಳ ವಕ್ತಾರರೊಬ್ಬರು ತಿಳಿಸಿದರು.

ಆಗ್ನೇಯ ಇರಾನ್‌ನ ಕೆರ್ಮನ್ ರಾಜ್ಯದಲ್ಲಿ 2003ರಲ್ಲಿ ಸಂಭವಿಸಿದ 6.6 ತೀವ್ರತೆಯ ಭೂಕಂಪದಲ್ಲಿ 31,000 ಮಂದಿ ಮೃತಪಟ್ಟಿರುವುದನ್ನು ಸ್ಮರಿಸಬಹುದಾಗಿದೆ. ಅದು ಐತಿಹಾಸಿಕ ನಗರ ಬಾಮ್‌ನ್ನು ನೆಲಸಮಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News