ಯೆಮನ್: ಡಿಸೆಂಬರ್‌ನಲ್ಲಿ 8,683 ನೆಲಬಾಂಬ್ ‌ಗಳ ತೆರವು

Update: 2019-01-08 16:45 GMT

ದುಬೈ, ಜ. 8: ಯೆಮನ್‌ನ್ನು ನೆಲಬಾಂಬ್ ಮುಕ್ತಗೊಳಿಸುವ ಅಭಿಯಾನದ ಭಾಗವಾಗಿ ಕಿಂಗ್ ಸಲ್ಮಾನ್ ಪರಿಹಾರ ಮತ್ತು ಮಾನವೀಯ ನೆರವು ಕೇಂದ್ರ (ಕೆಎಸ್‌ರಿಲೀಫ್)ವು, ಡಿಸೆಂಬರ್ 4ನೇ ವಾರದಲ್ಲಿ 167 ಮಾನವ ವಿರೋಧಿ ನೆಲಬಾಂಬ್‌ಗಳು, 4,840 ಟ್ಯಾಂಕ್ ವಿರೋಧಿ ನೆಲಬಾಂಬ್‌ಗಳು, 322 ಸ್ಫೋಟಕ ಸಾಧನಗಳು ಮತ್ತು 3,543 ಸ್ಫೋಟಗೊಳ್ಳದೆ ಉಳಿದ ಮದ್ದುಗುಂಡುಗಳನ್ನು ತೆರವುಗೊಳಿಸಿದೆ ಎಂದು ಸೌದಿ ಸರಕಾರಿ ಸುದ್ದಿ ಚಾನೆಲ್ ಅಲ್-ಅಖ್ಬರಿಯ ಹೇಳಿದೆ.

ಇದರೊಂದಿಗೆ ಡಿಸೆಂಬರ್‌ನಲ್ಲಿ ತೆರವುಗೊಳಿಸಲಾದ ನೆಲಬಾಂಬ್‌ಗಳ ಸಂಖ್ಯೆ 8,683ಕ್ಕೆ ಏರಿದೆ. ಹೌದಿ ಬಂಡುಕೋರರು ಈ ಬಾಂಬ್‌ಗಳನ್ನು ಭೂಮಿಯಲ್ಲಿ ಹೂಳಿಟ್ಟಿದ್ದರು ಎಂದಿದೆ.

2018 ಜೂನ್‌ನಿಂದ ಕೆಎಸ್‌ರಿಲೀಫ್ ಶಾಲೆಗಳು, ಮನೆಗಳು ಮತ್ತು ನಾಗರಿಕರ ಸ್ಥಳಗಳಿಂದ 31,635 ನೆಲಬಾಂಬ್‌ಗಳನ್ನು ತೆರವುಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News