ಸೌದಿ ಅರೇಬಿಯ: ಅಪ್ರಾಪ್ತ ವಯಸ್ಕರ ವಿವಾಹ ನಿಷೇಧ

Update: 2019-01-10 17:16 GMT

ರಿಯಾದ್, ಜ. 10: ಸೌದಿ ಅರೇಬಿಯದ ‘ಶೂರಾ ಕೌನ್ಸಿಲ್’ ಅಪ್ರಾಪ್ತ ವಯಸ್ಕರ ವಿವಾಹವನ್ನು ನಿಷೇಧಿಸಿದೆ. ಇದಕ್ಕೆ ಸಂಬಂಧಿಸಿದ ಹೇಳಿಕೆಯೊಂದನ್ನು ಕೌನ್ಸಿಲ್‌ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಕೌನ್ಸಿಲ್‌ನ ಇತ್ತೀಚಿನ ಸಭೆಯೊಂದರಲ್ಲಿ, ಗಂಡು ಅಥವಾ ಹೆಣ್ಣು ಸೇರಿದಂತೆ ಯಾವುದೇ ಅಪ್ರಾಪ್ತ ವಯಸ್ಕರ ವಿವಾಹವನ್ನು ನಿಷೇಧಿಸುವ ಕಾನೂನಿಗೆ ಕೌನ್ಸಿಲ್ ಸ್ಪೀಕರ್ ಅಬ್ದುಲ್ಲಾ ಅಲ್-ಶೇಖ್ ಅನುಮೋದನೆ ನೀಡಿದ್ದಾರೆ.

ಈ ಮಸೂದೆಗೆ ಕೌನ್ಸಿಲ್‌ನ ಮೂರನೇ ಎರಡರಷ್ಟು ಸದಸ್ಯರು ಬೆಂಬಲ ನೀಡಿದ್ದಾರೆ.

‘‘ಇದೊಂದು ಉತ್ತಮವಾದ ಹೆಜ್ಜೆ. ಈ ನಿರ್ಧಾರವನ್ನು ತೆಗೆದುಕೊಳ್ಳುವುದು ಸುಲಭವಿರಲಿಲ್ಲ’’ ಎಂದು ಶೂರಾ ಕೌನ್ಸಿಲ್ ಸದಸ್ಯೆ ಲತೀಫಾ ಅಲ್-ಶಅಲನ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News