ಯುಎಇಯಲ್ಲಿ ಲಘು ಭೂಕಂಪ

Update: 2019-01-11 15:53 GMT

ದುಬೈ, ಜ. 11: ಯುಎಇಯಲ್ಲಿ ಶುಕ್ರವಾರ ಲಘು ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.7ರಷ್ಟಿತ್ತು.

ಭೂಕಂಪದ ಕೇಂದ್ರಬಿಂದು ಒಮಾನ್ ದೇಶದ ದಿಬ್ಬ ನಗರದ ವಾಯುವ್ಯಕ್ಕಿತ್ತು.

ರಾಸ್ ಅಲ್ ಖೈಮಾದ ನಿವಾಸಿಗಳು, ಅದರಲ್ಲೂ ಮುಖ್ಯವಾಗಿ ಅಲ್ ರಮ್ಸ್ ಮತ್ತು ಜುಲ್ಫರ್ ಪ್ರದೇಶಗಳ ನಿವಾಸಿಗಳು, ತಾವು ಭೂಮಿಯ ಕಂಪನವನ್ನು ಅನುಭವಿಸಿರುವುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News