ಅಬುಧಾಬಿ: ವೇತನವಿಲ್ಲದೆ ಅತಂತ್ರ ಸ್ಥಿತಿಯಲ್ಲಿ 300 ನೌಕರರು

Update: 2019-01-11 16:29 GMT

ಅಬುಧಾಬಿ, ಜ. 11: ಅಬುಧಾಬಿಯಲ್ಲಿ ಕ್ಯಾಟರಿಂಗ್ ಕಂಪೆನಿಯೊಂದರ 300ಕ್ಕೂ ಅಧಿಕ ಉದ್ಯೋಗಿಗಳು ವೇತನ ಮತ್ತು ಸರಿಯಾದ ಆಹಾರವಿಲ್ಲದೆ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ‘ಖಲೀಜ್ ಟೈಮ್ಸ್’ ವರದಿ ಮಾಡಿದೆ.

ಈ ವ್ಯಕ್ತಿಗಳು ಮುಸ್ಸಾಫಾದಲ್ಲಿರುವ ಅಲ್ ವಸಿಟ ಎಮಿರೇಟ್ಸ್ ಕ್ಯಾಟರಿಂಗ್ ಸರ್ವಿಸಸ್‌ನಲ್ಲಿ ಬಾಣಸಿಗರು, ಚಾಲಕರು, ಸ್ವಚ್ಛತಾ ಕೆಲಸಗಾರರು, ನಿರ್ವಹಣಾ ಕೆಲಸಗಾರರು ಮತ್ತು ಜವಾನರಾಗಿ ಕೆಲಸ ಮಾಡುತ್ತಿದ್ದರು.

ಕೆಲವು ತಿಂಗಳುಗಳಿಂದ ತಮಗೆ ಕೆಲಸ ಹಾಗೂ ವೇತನವಿಲ್ಲ ಹಾಗೂ ತಾವು ಸಮೀಪದ ಸೂಪರ್‌ಮಾರ್ಕೆಟ್‌ಗಳು ಎಸೆದ ಆಹಾರಗಳನ್ನು ತಿಂದು ಬದುಕುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಅವರು ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ನೇಪಾಳ, ಈಜಿಪ್ಟ್, ನೈಜೀರಿಯ ಮತ್ತು ಫಿಲಿಪ್ಪೀನ್ಸ್ ದೇಶಗಳ ವಲಸಿಗರಾಗಿದ್ದಾರೆ.

ಅವರು ಮುಸ್ಸಾಫಾ ಕೈಗಾರಿಕಾ ಪ್ರದೇಶದಲ್ಲಿರುವ ಎರಡು ಅಂತಸ್ತುಗಳ ಮನೆಯೊಂದರಲ್ಲಿ ತಂಗಿದ್ದಾರೆ.

ಈ ಮನೆಯನ್ನು 24 ಗಂಟೆಗಳಲ್ಲಿ ತೆರವುಗೊಳಿಸುವಂತೆ ಕಂಪೆನಿ ತಮಗೆ ಸೂಚಿಸಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News