ಯುಎಇ ಉಪಾಧ್ಯಕ್ಷರನ್ನು ಭೇಟಿಯಾದ ರಾಹುಲ್ ಗಾಂಧಿ

Update: 2019-01-12 15:52 GMT

ದುಬೈ, ಜ. 12: ಯುಎಇ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಆ ದೇಶದ ಉಪಾಧ್ಯಕ್ಷ ಹಾಗೂ ಪ್ರಧಾನಿ ಹಾಗೂ ದುಬೈ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ನಡೆದ ಮಾತುಕತೆಯ ವೇಳೆ, ಉಭಯ ದೇಶಗಳ ನಡುವಿನ ಐತಿಹಾಸಿಕ ಸಂಬಂಧ ಹಾಗೂ ಸ್ನೇಹವನ್ನು ಉಭಯ ನಾಯಕರು ಸ್ಮರಿಸಿದರು.

ಈ ಸಂದರ್ಭದಲ್ಲಿ ದುಬೈಯ ಉಪ ಆಡಳಿತಗಾರ ಶೇಖ್ ಮಕ್ತೂಮ್ ಬಿನ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಉಪಸ್ಥಿತರಿದ್ದರು.

ಪರಸ್ಪರ ಸಹಿಷ್ಣುತೆ, ಹೊಂದಾಣಿಕೆ ಮತ್ತು ಅಂತರ್‌ಧರ್ಮೀಯ ಮಾತುಕತೆಗಳ ಮೂಲಕ ಎರಡು ದೇಶಗಳ ನಡುವಿನ ಬಾಂಧವ್ಯವನ್ನು ಮುಂದುವರಿಸುವ ಅಗತ್ಯವನ್ನು ಅವರು ಪ್ರತಿಪಾದಿಸಿದರು.

ದುಬೈ ನಾಗರಿಕ ವಾಯುಯಾನ ಪ್ರಾಧಿಕಾರದ ಅಧ್ಯಕ್ಷ ಶೇಖ್ ಅಹ್ಮದ್ ಬಿನ್ ಸಯೀದ್ ಅಲ್ ಮಕ್ತೂಮ್, ಕ್ಯಾನಿನೆಟ್ ವ್ಯವಹಾರಗಳು ಮತ್ತು ಭವಿಷ್ಯದ ಸಚಿವ ಮುಹಮ್ಮದ್ ಬಿನ್ ಅಬ್ದುಲ್ಲಾ ಅಲ್ ಗೆರ್ಗವಿ, ವಿದೇಶ ವ್ಯವಹಾರಗಳ ಸಹಾಯಕ ಸಚಿವ ಡಾ. ಅನ್ವರ್ ಬಿನ್ ಮುಹಮ್ಮದ್ ಗರ್ಗಾಶ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News