×
Ad

ಪಾಕ್ ಜೊತೆ ಶಾಂತಿ ಬೇಕು, ಆದರೆ ಮುಗ್ಧ ನಾಗರಿಕರ ರಕ್ತದಿಂದಲ್ಲ

Update: 2019-01-14 22:01 IST

ದುಬೈ, ಜ. 14: “ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಪಾಕಿಸ್ತಾನದೊಂದಿಗೆ ಶಾಂತಿಯುತ ಸಂಬಂಧಗಳನ್ನು ಹೊಂದಲು ಬಯಸುವೆ, ಆದರೆ ಅಮಾಯಕ ನಾಗರಿಕರ ಮೇಲೆ ಹಿಂಸಾಚಾರ ನಡೆದರೆ ಆ ದೇಶದೊಂದಿಗೆ ಶಾಂತಿ ಬೇಕಾಗಿಲ್ಲ” ಎಂಬ ಸ್ಪಷ್ಟ ಸಂದೇಶವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೀಡಿದ್ದಾರೆ.

‘‘ಪಾಕಿಸ್ತಾನದೊಂದಿಗೆ ಶಾಂತಿಯುತ ಸಂಬಂಧ ಹೊಂದಲು ನಾನು ಬಯಸುವೆ. ಆದರೆ, ನನ್ನ ದೇಶದ ಅಮಾಯಕ ನಾಗರಿಕರ ಮೇಲೆ ನಡೆಯುವ ಹಿಂಸಾಚಾರವನ್ನು ನಾನು ಸಹಿಸಲಾರೆ. ಇಲ್ಲಿ ಇದೇ ಮಹತ್ವದ ವಿಷಯ’’ ಎಂದರು.

ಯುಎಇಗೆ ನೀಡಿದ ಎರಡು ದಿನಗಳ ಭೇಟಿಯ ವೇಳೆ, ರವಿವಾರ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ವಿದೇಶಿ ಹೂಡಿಕೆಗಳ ಆಗಮನವು ದೇಶದ ರಾಜಕೀಯ ಪರಿಸರವನ್ನು ಅವಲಂಬಿಸಿದೆ ಎಂದು ರಾಹುಲ್ ಅಭಿಪ್ರಾಯಪಟ್ಟರು.

‘‘ಸದ್ಯ ಭಾರತದ ವಿದೇಶಿ ಹೂಡಿಕೆಯು 14 ವರ್ಷಗಳಲ್ಲೇ ಕನಿಷ್ಠ ಮಟ್ಟದಲ್ಲಿದೆ. ಸಾಂಪ್ರದಾಯಿಕವಾಗಿ ಭಾರತದಲ್ಲಿ ಶಾಂತಿಯುತ ವಾತಾವರಣವಿತ್ತು. ಆದರೆ, ಪ್ರಸಕ್ತ ಸರಕಾರವು ಅದನ್ನು ಹಾಳುಗಡೆವಿದೆ’’ ಎಂದರು.

ನೋಟು ನಿಷೇಧ ಮತ್ತು ಜಿಎಸ್‌ಟಿಯ ಅಸಮರ್ಪಕ ಬಳಕೆ ಆರ್ಥಿಕತೆಯನ್ನು ನಾಶಗೊಳಿಸಿದೆ ಎಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News