×
Ad

ಕೆಸಿಎಫ್ ಯುಎಇ: ಶೈಖ್ ಝಾಯಿದ್ ಜೀವನ ಚರಿತ್ರೆಯ ಕನ್ನಡಾನುವಾದ ಕೃತಿ ಬಿಡುಗಡೆ

Update: 2019-01-17 23:31 IST

ಅಜ್ಮಾನ್, ಜ. 17: ಕರ್ನಾಟಕ ಕಲ್ಚರಲ್ ಫೌಂಡೇಶನ್ - ಕೆಸಿಎಫ್ ಯುಎಇ ಸಮಿತಿಯು ಗಲ್ಫ್ ಇಷಾರ ಮೂರನೇ ವಾರ್ಷಿಕೋತ್ಸವದ ಪ್ರಯುಕ್ತ ಹೊರತಂದ ಯುಎಇ ರಾಷ್ಟ್ರಪಿತ ಅನುಪಮ ಆಡಳಿತಗಾರ, ಮಹಾನ್ ಮಾನವತಾವಾದಿ ಶೈಖ್ ಝಾಯಿದ್ ಜೀವನ ಚರಿತ್ರೆಯ ಕನ್ನಡಾನುವಾದ  "ಶತಮಾನದ ಶಕ್ತಿ ಶೈಖ್ ಝಾಯಿದ್"  ಕೃತಿ ಬಿಡುಗಡೆಯು ಅಜ್ಮಾನ್ ನಲ್ಲಿ ನಡೆಯಿತು.

ಮರ್ಕಝ್ ಡೈರೆಕ್ಟರ್ ಅಬ್ದುಲ್ ಹಕೀಮ್ ಅಝ್ಹರಿ ಯುಎಇ ಪ್ರಮುಖರಾದ ಸಲಾ ಮೂಸಾ ಹಸನ್  ಅಲ್ ಮದನಿ ಅವರಿಗೆ ಕೃತಿಯನ್ನು ನೀಡಿ ಬಿಡುಗಡೆಗೊಳಿಸಿದರು.

ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಹಮೀದ್ ಸಅದಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ರಾಜ್ಯ ನಗರಾಭಿವೃದ್ಧಿ ಸಚಿವರಾದ ಯುಟಿ ಖಾದರ್ ಉದ್ಘಾಟಿಸಿದರು. ರಾಜ್ಯ ಎಸ್ಸೆಸ್ಸೆಫ್ ಅಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಇಹ್ಸಾನ್ ಅಧ್ಯಕ್ಷ ಶಾಫಿ ಸಅದಿ ಬೆಂಗಳೂರು,  ಕೆಸಿಎಫ್ ಐಎನ್ ಸಿ ನಾಯಕರುಗಳಾದ ಹಾಜಿ ಶೈಖ್ ಭಾವಾ, ಪಿ ಎಂ ಹೆಚ್ ಹಮೀದ್ ಈಶ್ವಮಂಗಿಲ, ಉದ್ಯಮಿಗಳಾದ ಅಬ್ದುಲ್ ಸಮದ್ ಎನ್, ಇಕ್ಬಾಲ್ ಸಿದ್ದಕಟ್ಟೆ, ರಷೀದ್ ಕೈಕಂಬ, ರಝಾಕ್ ಕಾಂತಡ್ಕ, ಉಡುಪಿ ಜಿಲ್ಲಾ ಎಸ್ಸೆಸ್ಸೆಫ್ ಅಧ್ಯಕ್ಷರಾದ ಅಶ್ರಫ್ ರಝಾ ಅಂಜದಿ ಪಕ್ಷಿಕೆರೆ, ಮರ್ಕಝ್ ತಅಲೀಮುಲ್ ಇಹ್ಸಾನ್ ಮೂಳೂರು ಮ್ಯಾನೇಜರ್ ಮುಸ್ತಫಾ ಸಅದಿ ಮೂಳೂರು, ಪ್ರತಿಭೋತ್ಸವ ಸ್ವಾಗತ ಸಮಿತಿ ಚೇರ್ಮನ್ ಅಬ್ದುಲ್ ಖಾದರ್ ಸಾಲೆತ್ತೂರ್ ಸೇರಿದಂತೆ ಸೇರಿದಂತೆ ಹಲವು ಉಲಮಾ, ಉಮರಾ, ರಾಜಕೀಯ, ಸಾಮಾಜಿಕ ಕ್ಷೇತ್ರದ ಗಣ್ಯರುಗಳು, ಖ್ಯಾತ ಉದ್ಯಮಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿರಿಯ ಬರಹಗಾರರಾದ ಅಬೂಬಕರ್ ಸಅದಿ ನೆಕ್ರಾಜೆ ವಿರಚಿತ ಕೃತಿಯ ಮೂಲ ಮಲಯಾಳಂ ಆಗಿದ್ದು ಯುವ ಲೇಖಕರಾದ ಜುನೈದ್ ಸಖಾಫಿ ಜೀರ್ಮುಖಿ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಕಾರ್ಯಕ್ರಮದಲ್ಲಿ ಕೆಸಿಎಫ್ ಯುಎಇ ಪ್ರಕಾಶನ ವಿಭಾಗದ ಚೇರ್ಮಾನ್ ಝೈನುದ್ದೀನ್  ಹಾಜಿ ಬೆಳ್ಳಾರೆಯವರು ಪುಸ್ತಕದ ಮೂಲ ಲೇಖಕರಾದ ಅಬೂಬಕರ್ ಸಅದಿ ನೆಕ್ರಾಜೆ ರವರಿಗೆ ಕೆಸಿಎಫ್ ರಾಷ್ಟ್ರೀಯ ಸಮಿತಿ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಿದರು.

ಕರ್ನಾಟಕ ಕಲ್ಚರಲ್ ಫೌಂಡೇಶನ್ ಯುಎಇ ಎನ್ಎಂಸಿ ಮತ್ತು ಸಹ ಸಂಸ್ಥೆ, ಯುಎಇ ಎಕ್ಸ್ ಚೇಂಜ್, ತುಂಬೆ ಗ್ರೂಪ್, ಎಎಂಇ ಗ್ರೂಪ್ ಹಾಗೂ ಫಾತಿಮಾ ಗ್ರೂಪ್ ಆಫ್ ಕಂಪನೀಸ್ ಇದರ ಸಹಕಾರದಿಂದ ಈ ಕೃತಿಯನ್ನು ಹೊರತಂದಿದೆ. ಕಾರ್ಯಕ್ರಮದಲ್ಲಿ ಇಕ್ಬಾಲ್ ಕಾಜೂರ್ ಸ್ವಾಗತಿಸಿದರು. ಕರೀಂ ಮುಸ್ಲಿಯಾರ್ ವಂದಿಸಿ, ರಿಯಾಝ್ ಕೊಂಡಂಗೇರಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News