ಅಮೆರಿಕದಿಂದ ಇರಾನ್ ಸುದ್ದಿವಾಹಿನಿ ಪತ್ರಕರ್ತೆಯ ಬಂಧನ: ಬಿಡುಗಡೆಗೆ ಇರಾನ್ ಒತ್ತಾಯ

Update: 2019-01-18 15:43 GMT

ದುಬೈ, ಜ. 18: ಇರಾನ್‌ನ ಸರಕಾರಿ ಟಿವಿ ಚಾನೆಲ್ ‘ಪ್ರೆಸ್ ಟಿವಿ’ಯಲ್ಲಿ ಕೆಲಸ ಮಾಡುತ್ತಿದ್ದ ಅಮೆರಿಕದ ಪತ್ರಕರ್ತೆಯೊಬ್ಬರನ್ನು ಅಮೆರಿಕ ವಾಶಿಂಗ್ಟನ್‌ನಲ್ಲಿ ಬಂಧಿಸಿದೆ ಎಂದು ಇರಾನ್ ಹೇಳಿದೆ.

ಅವರನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂಬುದಾಗಿಯೂ ಪ್ರೆಸ್ ಟಿವಿ ವರದಿ ಮಾಡಿದೆ.

ಟವಿ ನಿರೂಪಕಿ ಹಾಗೂ ಸಾಕ್ಷಚಿತ್ರ ನಿರ್ಮಾಪಕಿ ಮಝಿಯಹ್ ಹಾಶಿಮೀನ್‌ರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಇರಾನ್ ಅಮೆರಿಕಕ್ಕೆ ಕರೆ ನೀಡಿದೆ.

ಅವರನ್ನು ಎಫ್‌ಬಿಐ ರವಿವಾರ ಸೇಂಟ್ ಲೂಯಿಸ್ ಲ್ಯಾಂಬರ್ಟ್ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ ಎಂದು ಇಂಗ್ಲಿಷ್ ಭಾಷೆಯ ಚಾನೆಲ್ ‘ಪ್ರೆಸ್ ಟಿವಿ’ ಹೇಳಿದೆ.

59 ವರ್ಷದ ಪತ್ರಕರ್ತೆ ಇರಾನ್‌ನಲ್ಲಿ ಒಂದು ದಶಕಕ್ಕಿಂತಲೂ ಹೆಚ್ಚಿನ ಅವಧಿಯಿಂದ ವಾಸಿಸುತ್ತಿದ್ದಾರೆ.

ಅವರನ್ನು ಕ್ರಿಮಿನಲ್ ಪ್ರಕರಣವೊಂದರ ‘ಭೌತಿಕ ಸಾಕ್ಷ’ (ಮೆಟೀರಿಯಲ್ ಎವಿಡೆನ್ಸ್’ ಎಂಬುದಾಗಿ ವಶಕ್ಕೆ ಪಡೆದುಕೊಳ್ಳಲಾಗಿದೆ ಹಾಗೂ ಅವರ ವಿರುದ್ಧ ಯಾವುದೇ ಆರೋಪಗಳನ್ನು ಔಪಚಾರಿಕವಾಗಿ ಹೊರಿಸಲಾಗಿಲ್ಲ.

ಅಮೆರಿಕದಲ್ಲಿ ಜನಿಸಿದ ಹಾಶಿಮೀನ್‌ರ ಮೂಲ ಹೆಸರು ಮೆಲಾನೀ ಫ್ರಾಂಕ್ಲಿನ್. ಇಸ್ಲಾಮ್ ಸ್ವೀಕರಿಸಿದ ಬಳಿಕ ಅವರು ತನ್ನ ಹೆಸರನ್ನು ಬದಲಾಯಿಸಿದರು.

ತನ್ನ ಕುಟುಂಬ ಸದಸ್ಯರನ್ನು ಭೇಟಿಯಾಗುವುದಕ್ಕಾಗಿ ಅವರು ವಾಶಿಂಗ್ಟನ್‌ಗೆ ಪ್ರಯಾಣಿಸಿದ್ದರು ಎಂದು ಪ್ರೆಸ್ ಟಿವಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News