ಎಚ್‌ಐಎಫ್ ಕತರ್ ಅಧ್ಯಕ್ಷರಾಗಿ ರಿಝ್ವಾನ್ ಅಹ್ಮದ್ ಆಯ್ಕೆ

Update: 2019-01-19 04:16 GMT

ದೋಹಾ, ಜ. 18: ಕತರ್ ನ ದೋಹಾದಲ್ಲಿ ಶುಕ್ರವಾರ ಆಯೋಜಿಸಿದ್ದ ಹೈಲ್ಯಾಂಡ್ ಇಸ್ಲಾಮಿಕ್ ಫೋರಮ್ ಕತರ್ ಸಾಮಾನ್ಯ ಸಭೆಯಲ್ಲಿ ಫೋರಮ್ ನ ಅಧ್ಯಕ್ಷರನ್ನಾಗಿ ಮಂಗಳೂರಿನ ರಿಝ್ವಾನ್ ಅಹ್ಮದ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಫರಾಝ್ ಅವರು ಕುರ್‌ಆನ್ ಪಠಿಸುವ ಮೂಲಕ ಸಾಮಾನ್ಯ ಸಭೆಯನ್ನು ಆರಂಭವಾಯಿತು.

ಈ ಸಂದರ್ಭ ಫೋರಮ್ ನ ನಿರ್ಗಮಿತ ಅಧ್ಯಕ್ಷ ಶುಐಬ್ ಅಹ್ಮದ್ ಉಪಸ್ಥಿತರಿದ್ದರು. ಫಾಹಿಮ್ ನೌಫಲ್ ಅಹ್ಮದ್ ಸ್ವಾಗತಿಸಿದರು ಹಾಗೂ ಹೈಲ್ಯಾಂಡ್ ಇಸ್ಲಾಮಿಕ್ ಫೋರಮ್ ಕತರ್ ರೂಪುಗೊಂಡ ಬಗ್ಗೆ ಹಾಗು ಅದರ ಚಟುವಟಿಕೆಗಳ ಬಗ್ಗೆ ಪವರ್ ಪಾಯಿಂಟ್ ಪ್ರದರ್ಶನ ನೀಡಿದರು.

ತನ್ನ ಅಧಿಕಾರವಧಿಯಲ್ಲಿ ಅಭೂತಪೂರ್ವ ಬೆಂಬಲ ನೀಡಿದ ಹೈಲ್ಯಾಂಡ್ ಇಸ್ಲಾಮಿಕ್ ಫೋರಮ್ ಕತರ್ ನ ಕಾರ್ಯಕಾರಿ ಸಮಿತಿ ಹಾಗೂ ಎಲ್ಲ ಸದಸ್ಯರಿಗೆ ಅವರು ಕೃತಜ್ಞತೆ ಸಲ್ಲಿಸಿದರು. ನೂತನ ಸಮಿತಿಗೆ ಕೂಡ ಇದೇ ರೀತಿಯ ಬೆಂಬಲ ನೀಡುವಂತೆ ಅವರು ಮನವಿ ಮಾಡಿದರು.

ನೂತನ ಅಧ್ಯಕ್ಷರನ್ನಾಗಿ ರಿಝ್ವಾನ್ ಅಹ್ಮದ್, ಪ್ರಧಾನ ಕಾರ್ಯದರ್ಶಿಯಾಗಿ ಶಫಾಕತ್ ಹುಸೈನ್ ಹಾಗೂ ಕೋಶಾಧಿಕಾರಿಯನ್ನಾಗಿ ಶೇಕ್ ಫೈಝಲ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಶೇಕ್ ಫೈಝಲ್ ಆರ್ಥಿಕ ವರದಿಯನ್ನು ಮಂಡಿಸಿದರು. ಮುಹಮ್ಮದ್ ಫೈಝಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News