ನೆಲಬಾಂಬ್ ನಿಷ್ಕ್ರಿಯಗೊಳಿಸುತ್ತಿದ್ದ 5 ತಜ್ಞರ ಸಾವು

Update: 2019-01-22 17:01 GMT

ರಿಯಾದ್, ಜ. 22: ಯೆಮನ್‌ನಲ್ಲಿ ಹೌದಿ ಬಂಡುಕೋರರು ಇಟ್ಟಿರುವ ನೆಲಬಾಂಬ್‌ ಗಳು ಸ್ಫೋಟಗೊಂಡು ಅವುಗಳನ್ನು ನಿಷ್ಕ್ರಿಯಗೊಳಿಸಲು ಪ್ರಯತ್ನಿಸುತ್ತಿದ್ದ ಸ್ಫೋಟಕ ತಜ್ಞರ ತಂಡದ ಸದಸ್ಯರು ಮೃತಪಟ್ಟಿದ್ದಾರೆ.

ದಕ್ಷಿಣ ಆಫ್ರಿಕದ ಇಬ್ಬರು, ಕ್ರೊಯೇಶಿಯದ ಒಬ್ಬರು, ಬೋಸ್ನಿಯದ ಒಬ್ಬರು ಮತ್ತು ಕೊಸೊವೊದ ಒಬ್ಬರು ಸ್ಫೋಟಕ ಪರಿಣತರು ಮೃತಪಟ್ಟವರು.

ಅವರು ಯೆಮನ್‌ನಲ್ಲಿ ಸೌದಿ ಅರೇಬಿಯ ನಡೆಸುತ್ತಿದ್ದ ನೆಲಬಾಂಬ್ ನಿಷ್ಕ್ರಿಯಗೊಳಿಸುವ ಕಾರ್ಯಕ್ರಮದಲ್ಲಿ ತೊಡಗಿದ್ದರು.

ಯೆಮನ್‌ನಲ್ಲಿ ಹೌದಿ ಬಂಡುಕೋರರು ಇಟ್ಟಿರುವ ನೆಲಬಾಂಬ್‌ಗಳನ್ನು ಪತ್ತೆಹಚ್ಚಿ ತೆರವುಗೊಳಿಸುವುದು ಸೌದಿ ಅರೇಬಿಯದ ‘ಮಾಸಮ್ ಯೋಜನೆ’ಯ ಉದ್ದೇಶವಾಗಿದೆ.

ಮಾರಿಬ್ ರಾಜ್ಯದಲ್ಲಿ ರವಿವಾರ ಸಂಭವಿಸಿದ ಸ್ಫೋಟದಲ್ಲಿ ಐವರು ಪರಿಣತರು ಸಾವಿಗೀಡಾಗಿದ್ದಾರೆ ಎಂದು ದೊರೆ ಸಲ್ಮಾನ್ ಮಾನವೀಯ ನೆರವು ಮತ್ತು ಪರಿಹಾರ ಕೇಂದ್ರ (ಕೆಎಸ್‌ರಿಲೀಫ್) ಸೋಮವಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News