ಅಜ್ಮಾನ್: ಮಾರ್ಚ್‌ನಲ್ಲಿ ತುಂಬೆ ಮೆಡಿಸಿಟಿ ಉದ್ಘಾಟನೆ

Update: 2019-01-22 17:39 GMT

ದುಬೈ, ಜ. 22: ಯುಎಇ ಹಾಗೂ ಆರೋಗ್ಯ ಕ್ಷೇತ್ರಕ್ಕೆ ತುಂಬೆ ಸಮೂಹದ ವಿಶಿಷ್ಟ ಕೊಡುಗೆಯಾದ ಅಜ್ಮಾನ್ ನ ತುಂಬೆ ಮೆಡಿಸಿಟಿ ಮಾರ್ಚ್‌ನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ತುಂಬೆ ಸಮೂಹ ಘೋಷಿಸಿದೆ.

ಯುಎಇಯ ಆರೋಗ್ಯ ಸೇವೆ ಕ್ಷೇತ್ರಕ್ಕೆ ತುಂಬೆ ಮೆಡಿಸಿಟಿ ಹೊಸ ಸೇರ್ಪಡೆಯಾಗಿದ್ದು ಖಾಸಗಿ ಕ್ಷೇತ್ರದಲ್ಲಿ ಈ ಮದರಿಯ ಪ್ರಥಮ ಯೋಜನೆಯಾಗಿದೆ. ತುಂಬೆ ಮೆಡಿಸಿಟಿ ಶಿಕ್ಷಣ/ತರಬೇತಿ, ಆರೋಗ್ಯ ಸೇವೆ ಮತ್ತು ಸಂಶೋಧನೆ/ಆವಿಷ್ಕಾರ ವಿಭಾಗದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ಜಾಗತಿಕ ಪರಿಣತರನ್ನು ಹೊಂದಿದೆ.

ಅಮೂಲಕ ಶಿಕ್ಷಣ, ಆರೋಗ್ಯಸೇವೆ ಮತ್ತು ಸಂಶೋಧನೆಯ ಭವಿಷ್ಯವನ್ನು ರೂಪಿಸಲು ಅತ್ಯುತ್ತಮ ವಿದ್ಯಾರ್ಥಿಗಳು ಮತ್ತು ವೃತ್ತಿಪರ ಪ್ರತಿಭೆಗಳನ್ನು ಆಕರ್ಷಿಸುತ್ತಿದೆ. ತುಂಬೆ ಮೆಡಿಸಿಟಿಯು ಯುಎಇಯ ಪ್ರಮುಖ ಖಾಸಗಿ ವೈದ್ಯಕೀಯ ವಿಶ್ವವಿದ್ಯಾನಿಲಯ ಗಲ್ಫ್ ವೈದ್ಯಕೀಯ ವಿದ್ಯಾನಿಲಯ, ತುಂಬೆ ವಿಶ್ವವಿದ್ಯಾನಿಲಯ ಆಸ್ಪತ್ರೆ, ತುಂಬೆ ದಂತ ಆಸ್ಪತ್ರೆ ಹಾಗೂ ತುಂಬೆ ಫಿಸಿಕಲ್ ಥೆರಪಿ ಮತ್ತು ಪುನರ್ವಸತಿ ಆಸ್ಪತ್ರೆಯನ್ನು ಹೊಂದಿದೆ.

ಬಿಲಿಯನ್ ಯುಇಎ ದಿರ್ಹಮ್‌ಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ತುಂಬೆ ಮೆಡಿಸಿಟಿಯು ಈ ಪ್ರದೇಶಕ್ಕೆ ಅತ್ಯುತ್ತಮ ಆರೋಗ್ಯಸೇವೆಯನ್ನು ಒದಗಿಸಲು ನಾವು ಪಟ್ಟಿರುವ ಶ್ರಮದ ಫಲವಾಗಿದೆ. ಈ ಪ್ರದೇಶದಲ್ಲಿರುವ ಅತ್ಯುತ್ಕೃಷ್ಟ ವೈದ್ಯಕೀಯ ನಗರಗಳಲ್ಲಿ ಒಂದಾಗಿರುವ ತುಂಬೆ ಮೆಡಿಸಿಟಿಯಲ್ಲಿ ರೋಗಿಗಳು ಅತ್ಯುತ್ಕೃಷ್ಟ ಸೇವೆಯನ್ನು ಪಡೆಯಲಿದ್ದಾರೆ ಎಂದು ತುಂಬೆ ಸಮೂಹದ ಸಂಸ್ಥಾಪಕ ತುಂಬೆ ಮೊಯಿದಿನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News