ಫೆಲೆಸ್ತೀನ್ ವಿರುದ್ಧದ ಇಸ್ರೇಲ್ ನೀತಿಗಳನ್ನು ತಿರಸ್ಕರಿಸುತ್ತೇವೆ

Update: 2019-01-23 17:29 GMT

ರಿಯಾದ್, ಜ. 23: ಫೆಲೆಸ್ತೀನ್ ಜನರ ವಿರುದ್ಧದ ಜನಾಂಗೀಯ ತಾರತಮ್ಯವನ್ನು ಖಾಯಂಗೊಳಿಸುವ, ಅವರ ರಾಷ್ಟ್ರೀಯ ಅಸ್ತಿತ್ವವನ್ನು ಸಂಪೂರ್ಣವಾಗಿ ನಾಶಗೊಳಿಸುವ ಹಾಗೂ ಅವರ ಕಾನೂನುಬದ್ಧ ಹಕ್ಕುಗಳನ್ನು ಕಡೆಗಣಿಸುವ ಇಸ್ರೇಲ್‌ನ ಎಲ್ಲ ನೀತಿಗಳು ಮತ್ತು ರೂಢಿಗಳನ್ನು ಸೌದಿ ಅರೇಬಿಯ ತಿರಸ್ಕರಿಸಿದೆ ಎಂದು ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನುದ್ದೇಶಿಸಿ ಮಾತನಾಡಿದ ವಿಶ್ವಸಂಸ್ಥೆಗೆ ಸೌದಿ ಅರೇಬಿಯದ ಖಾಯಂ ಪ್ರತಿನಿಧಿ ಅಬ್ದುಲ್ಲಾ ಬಿನ್ ಯಹ್ಯಾ ಅಲ್-ಮಾಲಮಿ, ಇಸ್ರೇಲ್‌ನ ವಸಾಹತು ಯೋಜನೆಗಳನ್ನು ನಿಲ್ಲಿಸಲು ಮಧ್ಯಪ್ರವೇಶಿಸುವಂತೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದರು.

‘‘ಫೆಲೆಸ್ತೀನಿಯರು ನಿರಂತರವಾಗಿ ದುರಂತಗಳಿಗೆ ಬಲಿಯಾಗುತ್ತಿದ್ದಾರೆ’’ ಎಂದು ಅವರು ಹೇಳಿದರು.

‘‘70 ವರ್ಷಗಳ ಹಿಂದೆ, ಫೆಲೆಸ್ತೀನಿಯರು ಜಗತ್ತು ಹಿಂದೆಂದೂ ಕಂಡಿರದಿದ್ದ ಬೃಹತ್ ಮಾನವೀಯ ದುರಂತಕ್ಕೆ ಒಳಗಾದರು. ಭೂಮಾಲೀಕರು ನಿರ್ವಸಿತರಾದರು. ಹಕ್ಕು ಇರದಿದ್ದವರಿಗೆ ಭೂಮಿಯ ಹಕ್ಕು ನೀಡಲಾಯಿತು. ಭೂಮಿಯ ಮಾಲೀಕರಿಗೆ ಅದರ ಹಕ್ಕನ್ನು ನಿರಾಕರಿಸಲಾಯಿತು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News