ಬಾಲಕಿಯೊಂದಿಗೆ ಅಸಭ್ಯ ವರ್ತನೆ: ಭಾರತೀಯ ಮೂಲದ ಕಾರ್ಮಿಕನ ವಿರುದ್ಧ ಪ್ರಕರಣ ದಾಖಲು

Update: 2019-01-26 16:17 GMT

ದುಬೈ,ಜ.26: 14 ವರ್ಷ ವಯಸ್ಸಿನ ಶಾಲಾಬಾಲಕಿಯೊಬ್ಬಳನ್ನು ಅಸಭ್ಯವಾದ ರೀತಿಯಲ್ಲಿ ಸ್ಪರ್ಶಿಸಿದ ಆರೋಪಕ್ಕಾಗಿ ಭಾರತೀಯ ಮೂಲದ ಕಟ್ಟಡನಿರ್ಮಾಣ ಕಾರ್ಮಿಕನೊಬ್ಬನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮೆಟ್ರೋ ನಿಲ್ದಾಣದಲ್ಲಿ ಈ ಶಾಲಾಬಾಲಕಿ ನಡೆಯುತ್ತಿದ್ದಾಗ ಆರೋಪಿಯು, ಬಾಲಕಿಯನ್ನು ಅಸಭ್ಯವಾಗಿ ಸ್ಪರ್ಶಿಸಿದ್ದಾನೆಂದು, ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ. ಆರೋಪಿಯು 32 ವರ್ಷ ವಯಸ್ಸಿನವಾಗಿದ್ದು, ಘಟನೆ ನಡೆದ ವೇಳೆ ಆತ ಮದ್ಯ ಸೇವಿಸಿದ್ದನೆಂದು ಅವರು ಹೇಳಿರುವುದಾಗಿ ಖಲೀಜ್ ಟೈಮ್ಸ್ ವರದಿ ಮಾಡಿದೆ.

ತಾನು ಮೆಟ್ರೊ ನಿಲ್ದಾಣದಲ್ಲಿ ತನ್ನ ಬ್ಯಾಗ್‌ನಲ್ಲಿ ಹಣವನ್ನಿರಿಸುತ್ತಿದ್ದಾಗ, ಆರೋಪಿಯು ತನ್ನನ್ನು ಹಿಡಿದೆಳೆದಿದ್ದನೆಂದು ಬಾಲಕಿಯು ವಿಚಾರಣೆಯ ವೇಳೆ ತಿಳಿಸಿದ್ದಾಳೆ. ತಾನು ತೀವ್ರವಾಗಿ ಭಯಗ್ರಸ್ತಳಾಗಿದ್ದರಿಂದ ತನಗೆ ಕಿರುಚಲು ಅಥವಾ ಆತನನ್ನು ಗದರಿಸಲು ಸಾಧ್ಯವಾಗಲಿಲ್ಲವೆಂದು ಆಕೆ ಹೇಳಿದ್ದಾಳೆ.

ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಪೊಲೀಸರು ಅದರ ತನಿಖೆ ನಡೆಸುತ್ತಿದ್ದಾರೆ. ಪರವಾನಿಗೆ ರಹಿತವಾಗಿ ಮದ್ಯಪಾನ ಸೇವನೆಯ ಆರೋಪದಲ್ಲಿ ಆರೋಪಿಗೆ 2 ಸಾವಿರ ದಿರ್ಹಮ್ ದಂಡ ವಿಧಿಸಲಾಗಿದೆ. ಬಾಲಕಿಯ ಜೊತೆ ಆರೋಪಿಯ ಅಸಭ್ಯವರ್ತನೆಗೆ ಸಂಬಂಧಿಸಿ ಫೆಬ್ರವರಿ 13ರಂದು ನ್ಯಾಯಾಲಯ ತೀರ್ಪು ನೀಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News