ಸೌದಿ ಅರೇಬಿಯ: ಕಾನೂನು ಉಲ್ಲಂಘನೆಗಾಗಿ 25 ಲಕ್ಷ ಬಂಧನ

Update: 2019-01-30 17:16 GMT

 ರಿಯಾದ್, ಜ. 30: ಸೌದಿ ಅರೇಬಿಯದಲ್ಲಿ ವರ್ಷವಿಡೀ ನಡೆದ ಕಾರ್ಯಾಚರಣೆಯಲ್ಲಿ ವಾಸ್ತವ್ಯ, ಕಾರ್ಮಿಕ ಮತ್ತು ಗಡಿ ಕಾನೂನುಗಳನ್ನು ಉಲ್ಲಂಘಿಸಿದ 25 ಲಕ್ಷಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ.

ಕಾನೂನು ಉಲ್ಲಂಘಕರ ವಿರುದ್ಧದ ಕಾರ್ಯಾಚರಣೆಯನ್ನು 2017 ನವೆಂಬರ್‌ನಲ್ಲಿ ಆರಂಭಿಸಲಾಯಿತು. ಅಂದಿನಿಂದ ಒಂದು ವರ್ಷದ ಅವಧಿಯಲ್ಲಿ 25,04,037 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕೃತ ವರದಿಯೊಂದು ತಿಳಿಸಿದೆ. ಈ ಪೈಕಿ 19,49,024 ಮಂದಿಯನ್ನು ವಾಸ್ತವ್ಯ ಕಾನೂನು ಉಲ್ಲಂಘನೆಗಾಗಿ ಬಂಧಿಸಲಾದರೆ, 3,83,033 ಮಂದಿಯನ್ನು ಕಾರ್ಮಿಕ ಕಾನೂನು ಉಲ್ಲಂಘನೆಗಾಗಿ ದಸ್ತಗಿರಿ ಮಾಡಲಾಗಿದೆ.

ಗಡಿ ನಿಯಮ ಉಲ್ಲಂಘನೆಗಾಗಿ 1,71,980 ಮಂದಿಯನ್ನು ಹಿಡಿಯಲಾಯಿತು ಹಾಗೂ ಅಕ್ರಮವಾಗಿ ಗಡಿ ದಾಟಿ ಸೌದಿ ಅರೇಬಿಯಕ್ಕೆ ಬಂದ ಆರೋಪದಲ್ಲಿ 41,233 ಮಂದಿಯನ್ನು ಸೆರೆ ಹಿಡಿಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News