ಗಲ್ಫ್ ವೈದ್ಯಕೀಯ ವಿವಿ ಹಾಗೂ ಇಟಲಿಯ ವಿಟ-ಸೆಲ್ಯೂಟ್ ಸ್ಯಾನ್ ರಫೇಲೆ ವಿವಿ ಮಧ್ಯೆ ಒಪ್ಪಂದ

Update: 2019-01-31 14:55 GMT

ಅಜ್ಮನ್,ಜ.31: ಜನವರಿ 28, 2019ರಂದು ದುಬೈಯಲ್ಲಿ ನಡೆದ ಅರಬ್ ಹೆಲ್ತ್ 2019 ಪ್ರದರ್ಶನದಲ್ಲಿ ಮಧ್ಯಪ್ರಾಚ್ಯ ರಾಷ್ಟ್ರದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯ (ಜಿಎಂಯು) ಮತ್ತು ಇಟಲಿಯ ವಿಟ-ಸೆಲ್ಯೂಟ್ ಸ್ಯಾನ್ ರಫೇಲೆ ವಿಶ್ವವಿದ್ಯಾನಿಲಯ ಆರೋಗ್ಯಸೇವೆ ವ್ಯವಸ್ಥಾಪನೆ, ನೀತಿ ಮತ್ತು ಆರೋಗ್ಯ ಆರ್ಥಶಾಸ್ತ್ರದಲ್ಲಿ ಅಂತರ್‌ರಾಷ್ಟ್ರೀಯ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿದೆ.

ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಹೊಸ್ಸಮ್ ಹಮ್ದಿ ಮತ್ತು ವಿಟ-ಸೆಲ್ಯೂಟ್ ಸ್ಯಾನ್ ರಫೇಲೆ ವಿಶ್ವವಿದ್ಯಾನಿಲಯದ ಡೀನ್ ಪ್ರೊ. ಎನ್ರಿಕೊ ಗೆರ್ಲೊನ್ ಈ ಒಪ್ಪಂದಕ್ಕೆ ಸಹಿ ಹಾಕಿದರು.

ಜಿಎಂಯುನ ಆರೋಗ್ಯಸೇವೆ ವ್ಯವಸ್ಥಾಪನೆ ಮತ್ತು ಅರ್ಥಶಾಸ್ತ್ರ ಕಾಲೇಜು ನೀಡುವ ಆರೋಗ್ಯಸೇವೆ ವ್ಯವಸ್ಥಾಪನೆ ನೀತಿ ಮತ್ತು ಆರೋಗ್ಯ ಆರ್ಥಶಾಸ್ತ್ರದ ಕಾರ್ಯವಾಹ ಸ್ನಾತಕೋತರ ಪದವಿಯನ್ನು ಜಂಟಿಯಾಗಿ ಒದಗಿಸುವ ಮೂಲಕ ಈ ಪಾಲುದಾರಿಕೆ ಕೂಡಲೇ ಚಾಲನೆಗೆ ಬರಲಿದೆ. ಜಂಟಿ ಕಾರ್ಯಕ್ರಮಗಳು ಮತ್ತು ಸಭೆಗಳು ಹಾಗೂ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಪರಸ್ಪರ ಬದಲಾವಣೆಯನ್ನು ಪ್ರೋತ್ಸಾಹಿಸುವ ಮೂಲಕ ಪರಸ್ಪರ ಲಾಭದಾಯಕವಾದ ಕ್ಷೇತ್ರದಲ್ಲಿ ಸಹಕಾರಕ್ಕೆ ಮುಂದಾಗುವಂತೆ ಒಪ್ಪಂದದಲ್ಲಿ ಸೂಚಿಸಲಾಗಿದೆ. ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯ ಮತ್ತು ವಿಟ-ಸೆಲ್ಯೂಟ್ ಸ್ಯಾನ್ ರಫೇಲೆ ವಿಶ್ವವಿದ್ಯಾನಿಲಯ ಒಂದೇ ಮಾದರಿಯ ವೈದ್ಯಕೀಯ ಶಿಕ್ಷಣ, ಆರೋಗ್ಯಸೇವೆ ಮತ್ತು ಸಂಶೋಧನಾ ಕಾರ್ಯಕ್ರಮವನ್ನು ಅನುಸರಿಸುತ್ತಿದ್ದು ರೋಗಿಗಳ ಹಿತಾಸಕ್ತಿಯೇ ಪ್ರಮುಖವಾಗಿದೆ. ಈ ಒಂದು ಕಾರಣದಿಂದ ಈ ಪಾಲುದಾರಿಕೆ ಇಂದು ನಿಜವಾಗಿದೆ ಎಂದು ಪ್ರೊ. ಎನ್ರಿಕೊ ಗೆರ್ಲೊನ್ ತಿಳಿಸಿದ್ದಾರೆ.

ಸಮರ್ಥನೀಯ ಸಮುದಾಯ ಅಭಿವೃದ್ಧಿಗಾಗಿ ಗುಣಮಟ್ಟದ ಆರೋಗ್ಯ ವೃತ್ತಿ ಶಿಕ್ಷಣ, ಸಂಶೋಧನೆ, ಆರೋಗ್ಯಸೇವೆ ಮತ್ತು ಸಾಮಾಜಿಕ ಹೊಣೆಗಾರಿಕೆಯ ಸಂಯೋಜನೆಯ ಮೂಲಕ ಪ್ರತಿಷ್ಠಿತ ಶೈಕ್ಷಣಿಕ ಆರೋಗ್ಯಸೇವೆ ಸಂಸ್ಥೆಯಾಗಬೇಕು ಎಂಬ ನಮ್ಮ ದೃಷ್ಟಿಕೋನಕ್ಕೆ ಸರಿಹೊಂದುವಂತೆ ವಿಟ-ಸೆಲ್ಯೂಟ್ ಸ್ಯಾನ್ ರಫೇಲೆ ವಿಶ್ವವಿದ್ಯಾನಿಲಯದ ಜೊತೆ ಒಪ್ಪಂದ ಮಾಡಿಕೊಳ್ಳಲು ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯಕ್ಕೆ ಸಂತಸವಾಗಿದೆ ಎಂದು ಪ್ರೊ.ಹೊಸ್ಸಮ್ ಹಮ್ದಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News