ಮಕ್ಕಾ ಸಾರ್ವಜನಿಕ ಸಾರಿಗೆಗೆ 400 ಬಸ್‌ಗಳ ಸೇರ್ಪಡೆ

Update: 2019-01-31 17:21 GMT

ಜಿದ್ದಾ, ಜ. 31: ಮಕ್ಕಾ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರವು ಮಕ್ಕಾ ಸಾರ್ವಜನಿಕ ಸಾರಿಗೆಗೆ 400 ಬಸ್‌ಗಳನ್ನು ಸೇರ್ಪಡೆಗೊಳಿಸಲು ಯೋಜನೆ ರೂಪಿಸಿದ್ದು, ಬಸ್‌ಗಳ ನಿರ್ಮಾಣವು ಕೊನೆಯ ಹಂತದಲ್ಲಿದೆ.

ಬಸ್‌ಗಳ ನಿರ್ಮಾಣ ಮತ್ತು ಹಸ್ತಾಂತರ ಪ್ರಕ್ರಿಯೆಯು 2019ರ ಕೊನೆಯ ವೇಳೆಗೆ ಪೂರ್ಣಗೊಳ್ಳುವುದು ಹಾಗೂ 2020ರ ಆರಂಭದ ವೇಳೆಗೆ ಬಸ್‌ಗಳು ಪ್ರಯಾಣ ಆರಂಭಿಸುವುದು.

ಯಾತ್ರಿಕರು ಮತ್ತು ನಗರದ ನಿವಾಸಿಗಳ ಸೇವೆಗಾಗಿ ಈ ಯೋಜನೆಯನ್ನು ರೂಪಿಸಲಾಗಿದೆ. ಇದರಿಂದಾಗಿ ನಗರ ಸಾರಿಗೆಯು ಸುಗಮವಾಗಲಿದೆ.

ಪರಿಸರಸ್ನೇಹಿಯಾಗಿರುವ ಬಸ್‌ಗಳಲ್ಲಿ ಸ್ವಯಂಚಾಲಿತ ಹಣ ಸಂಗ್ರಹ ಮತ್ತು ಪಾವತಿ ವ್ಯವಸ್ಥೆ, ವಿಶೇಷ ಗಮನ ಬೇಕಾದ ಜನರಿಗೆ ಬೇಕಾದ ಸೌಲಭ್ಯಗಳು, ವೈಫೈ ಸೇವೆಗಳು, ಉತ್ತಮ ವಾತಾನುಕೂಲಿ ವ್ಯವಸ್ಥೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News