ಐಎಫ್ಎಫ್ ಬೈಶ್, ಜಿಝಾನ್ ಘಟಕದ ವತಿಯಿಂದ "ಬೈಶ್ ಕ್ರೀಡೋತ್ಸವ"

Update: 2019-02-01 17:54 GMT

ರಿಯಾದ್, ಫೆ. 1: ಇಂಡಿಯಾ ಫ್ರೆಟರ್ನಿಟಿ ಫೋರಂ (ಐಎಫ್ಎಫ್) ಸೌದಿ ಅರೇಬಿಯಾ ಬೈಶ್ ಘಟಕ ಆಯೋಜಿಸಿದ್ದ ‌"ಫ್ರೆಟರ್ನಿಟಿ ಫೆಸ್ಟ್ 2019"ರ ಪ್ರಯುಕ್ತ ಬೈಶ್ ಕ್ರೀಡೋತ್ಸವವು ಬೈಶ್ ನ ಫೆನ್ಸ್ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಸ್ನೇಹಕ್ಕಾಗಿ ಕ್ರೀಡೆ ಎಂಬ ಧ್ಯೇಯ ವಾಕ್ಯದೊಂದಿಗೆ ಅನಿವಾಸಿ ಭಾರತೀಯರಿಗಾಗಿ ನಡೆದ ಬೈಶ್ ಕ್ರೀಡೋತ್ಸವದಲ್ಲಿ ಕ್ರಿಕೆಟ್, ವಾಲಿಬಾಲ್, ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆಗಳು ನಡೆದವು. ಕ್ರೀಡೋತ್ಸವದಲ್ಲಿ ನೂರಾರು ಕ್ರೀಡಾಪಟುಗಳನ್ನೊಳಗೊಂಡ ಒಟ್ಟು 10 ತಂಡಗಳು ಭಾಗವಹಿಸಿದ್ದವು.

ಕ್ರೀಡೋತ್ಸವದ ಚಾಂಪಿಯನ್ ಪಟ್ಟವನ್ನು ಫತೇ ಅಲ್ ಜುನೂಬ್ ತಂಡವು ತನ್ನದಾಗಿಸಿಕೊಂಡಿತು. ಕ್ರೀಡೋತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯುನೈಟೆಡ್ ಟೆಕ್ ಸಂಸ್ಥೆಯ ರಿಯಾಝ್, ಅಬ್ದುಲ್ ಬಶೀರ್ ಕೈಕಂಬ,ಐಎಫ್ಎಫ್ ಜಿಲ್ಲಾ ಸಮಿತಿ ಸದಸ್ಯರಾದ ಸಲೀಮ್ ಗುರುವಾಯನಕೆರೆ ಹಾಗೂ ಐಎಫ್ಎಫ್ ಬೈಶ್ ಘಟಕದ ಅಧ್ಯಕ್ಷ ರಹಿಮಾನ್ ಪೋರ್ಕೋಡಿ ಉಪಸ್ಥಿತರಿದ್ದರು.

ಕ್ರೀಡೋತ್ಸವು ಐಎಫ್ಎಫ್ ಅಭಾ/ಜಿಝಾನ್ ವಲಯಾಧ್ಯಕ್ಷ ಇಕ್ಬಾಲ್ ಕೂಳೂರು ಅವರ ಸಮಾರೋಪ ಭಾಷಣದೊಂದಿಗೆ ಕೊನೆಗೊಂಡಿತು. ಕ್ರೀಡೋತ್ಸವದ ಸಂಚಾಲಕ ತಂಶೀರ್ ಬಜ್ಪೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News