ಅಬುಧಾಬಿಯಲ್ಲಿ ಪೋಪ್‌ ಫ್ರಾನ್ಸಿಸ್ ರಿಂದ ಐತಿಹಾಸಿಕ ಪ್ರಾರ್ಥನೆ

Update: 2019-02-05 15:08 GMT

ಅಬುಧಾಬಿ (ಯುಎಇ), ಫೆ. 5: ಪೋಪ್ ಫ್ರಾನ್ಸಿಸ್ ಮಂಗಳವಾರ ಅಬುಧಾಬಿಯಲ್ಲಿ ಐತಿಹಾಸಿಕ ಸಾಮೂಹಿಕ ಪ್ರಾರ್ಥನೆಯನ್ನು ನೆರವೇರಿಸಿದ್ದಾರೆ. ಪ್ರಾರ್ಥನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಶ್ರದ್ಧಾಳುಗಳು ಭಾಗವಹಿಸಿದರು.

ಪೋಪ್ ಒಬ್ಬರು ಅರೇಬಿಯನ್ ಪರ್ಯಾಯ ದ್ವೀಪಕ್ಕೆ ಭೇಟಿ ನೀಡಿರುವುದು ಇದೇ ಮೊದಲ ಬಾರಿಯಾಗಿದೆ.

ಶೇಖ್ ಝಾಯೇದ್ ಕ್ರೀಡಾ ನಗರ ಸ್ಟೇಡಿಯಂನಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಅಗಾಧ ಸಂಖ್ಯೆಯ ಜನರ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದಕ್ಕಾಗಿ ಕ್ರೀಡಾಂಗಣದ ಬಾಗಿಲನ್ನು ಮುಂಜಾನೆ 5 ಗಂಟೆಗೆ ತೆರೆಯಲಾಯಿತು.

ಯುಎಇ ಆದ್ಯಂತದ ಚರ್ಚ್‌ಗಳಿಂದ ಆರಿಸಲಾದ 120 ಮಂದಿ ಗಾಯಕರು ಶ್ಲೋಕಗಳನ್ನು ಹಾಡಿದರು.

ಈ ಸಂದರ್ಭದಲ್ಲಿ ಸಂದೇಶವೊಂದನ್ನು ನೀಡಿದ ಪೋಪ್ ಫ್ರಾನ್ಸಿಸ್, ಕ್ರೈಸ್ತನ ಅನುಯಾಯಿಯಾಗಲು ಶ್ರೇಷ್ಠ ಕೆಲಸಗಳನ್ನು ಮಾಡಬೇಕೆಂದಿಲ್ಲ ಎಂದರು.

‘‘ಶ್ರೇಷ್ಠ ಕೆಲಸಗಳನ್ನು ಮಾಡಿ ಅಥವಾ ಅಸಾಧಾರಣ ಕೃತ್ಯಗಳ ಮೂಲಕ ಜನರ ಗಮನವನ್ನು ಸೆಳೆಯಿರಿ ಎಂಬುದಾಗಿ ಯೇಸು ಕ್ರಿಸ್ತ ನಮಗೆ ಹೇಳಲಿಲ್ಲ. ನಮ್ಮ ಜೀವನವೆಂಬ ಒಂದು ಕಲಾತ್ಮಕ ಕೃತಿಯನ್ನು ಸೃಷ್ಟಿಸಿ ಎಂದಷ್ಟೇ ಅವರು ನಮಗೆ ಸೂಚಿಸಿದರು’’ ಎಂದು ಪೋಪ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News