ಖಶೋಗಿಗೆ ನಾನೇ ಹೋಗಿ ಗುಂಡು ಹಾರಿಸುತ್ತೇನೆ ಎಂದಿದ್ದ ಸೌದಿ ಯುವರಾಜ?

Update: 2019-02-08 15:30 GMT

ವಾಶಿಂಗ್ಟನ್, ಫೆ. 8: ಸೌದಿ ಅರೇಬಿಯದ ಪತ್ರಕರ್ತ ಜಮಾಲ್ ಖಶೋಗಿ ಇಸ್ತಾಂಬುಲ್‌ನಲ್ಲಿ ಕೊಲೆಯಾಗುವ ಒಂದು ವರ್ಷ ಮೊದಲೇ, ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್, ಖಶೋಗಿಯನ್ನು ಗುಂಡು ಹಾರಿಸಿ ಕೊಲ್ಲುವುದಾಗಿ ತನ್ನ ಸಹಾಯಕನೊಬ್ಬನ ಬಳಿ ಹೇಳಿದ್ದರು ಎಂದು ಅಮೆರಿಕ ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

ಭಿನ್ನಮತೀಯ ಪತ್ರಕರ್ತನನ್ನು ಕೊಲ್ಲಲು ಮುಹಮ್ಮದ್ ಬಿನ್ ಸಲ್ಮಾನ್ ಸಿದ್ಧವಾಗಿದ್ದರು ಎಂಬ ನಿರ್ಧಾರಕ್ಕೆ ಅಮೆರಿಕ ಗುಪ್ತಚರ ಇಲಾಖೆ ಬಂದಿದೆ. ಆದಾಗ್ಯೂ, ಅಕ್ಷರಶಃ ಗುಂಡು ಹಾರಿಸುವ ಇಂಗಿತವನ್ನು ಅವರು ವ್ಯಕ್ತಪಡಿಸಿರಲಿಕ್ಕಿಲ್ಲ ಎಂದು ಅದು ಅಭಿಪ್ರಾಯಪಟ್ಟಿದೆ.

ಯುವರಾಜ ಮುಹಮ್ಮದ್ ಮತ್ತು ಅವರ ಸಹಾಯಕ ತುರ್ಕಿ ಅಲ್ದಾಖಿಲ್ ನಡುವಿನ ಸಂಭಾಷಣೆಯು 2017 ಸೆಪ್ಟಂಬರ್‌ನಲ್ಲಿ ನಡೆದಿತ್ತು ಎಂದು ಪತ್ರಿಕೆ ಹೇಳಿದೆ.

‘‘ಸೌದಿ ಅರೇಬಿಯಕ್ಕೆ ವಾಪಸಾಗುವಂತೆ ಖಶೋಗಿಯನ್ನು ಪುಸಲಾಯಿಸಲು ಅಸಾಧ್ಯವಾದರೆ, ಅವರನ್ನು ಬಲಪ್ರಯೋಗಿಸಿ ಕರೆತರಬೇಕು. ಎರಡೂ ಪ್ರಯತ್ನಗಳು ಫಲಿಸದಿದ್ದರೆ, ನಾನೇ ಖಶೋಗಿಯ ಹಿಂದೆ ಹೋಗಿ ಗುಂಡು ಹಾರಿಸುತ್ತೇನೆ’’ ಎಂಬುದಾಗಿ ಯುವರಾಜ ಹೇಳಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News