ಶಾರ್ಜಾ: 7ನೇ ಮಹಡಿಯಿಂದ ಬಿದ್ದು ಕೇರಳ ನಿವಾಸಿ ಸಾವು

Update: 2019-02-08 15:35 GMT

ಶಾರ್ಜಾ, ಫೆ. 8: ಶಾರ್ಜಾದ ಅಲ್-ಮಜಾರ ಪ್ರದೇಶದಲ್ಲಿ ಕಟ್ಟಡವೊಂದರ ಏಳನೇ ಮಹಡಿಯಿಂದ ಬಿದ್ದು 32 ವರ್ಷದ ಭಾರತೀಯ ವ್ಯಕ್ತಿಯೊಬ್ಬರು ಗುರುವಾರ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಗೋಪಕುಮಾರ್ ಕೇರಳ ನಿವಾಸಿಯಾಗಿದ್ದು, ಇಲ್ಲಿ ನಿರ್ವಹಣಾ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

ಕಟ್ಟಡದ ಕಾವಲುಗಾರನೊಂದಿಗೆ ಒಂದೇ ಕೋಣೆಯಲ್ಲಿ ಅವರು ವಾಸಿಸುತ್ತಿದ್ದರು. ಕಾವಲುಗಾರನನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News